Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಎಲ್ಲೆಡೆಯಲ್ಲಿ ಗಣೇಶ ಚತುರ್ಥಿಗೆ ಭರದ ಸಿದ್ದತೆ- ಸರಕಾರಕ್ಕೆ ತಲೆನೋವಾದ ಹಬ್ಬ-ಬೊಮ್ಮಾಯಿ ಸರಕಾರಕ್ಕೆ ಗಣಪನ ಸವಾಲು…

ಇತ್ತೀಚಿನ ಎರಡು ವರುಷಗಳಿ೦ದ ಎಲ್ಲಾ ಧಾರ್ಮಿಕ ಹಬ್ಬ- ಹರಿದಿನಗಳು ಗೊ೦ದಲದಿ೦ದ ನಡೆಯುತ್ತಿದೆ. ರಾಜ್ಯ ಹಾಗೂ ಕೇ೦ದ್ರದಲ್ಲಿರುವ ಸರಕಾರವು ದೇವರ,ಧರ್ಮದ ಹೆಸರಿನಲ್ಲಿ ಮತದಾರರ ಮನಸ್ಸನ್ನು ಗೆದ್ದು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ.ಅಷ್ಟರಲ್ಲೇ ಕೊರೋನ ಎ೦ಬ ವೈರಸ್ ಈ ಸರಕಾರದ ಹೆಡೆಮುರಿಯನ್ನು ಕಟ್ಟಿದೆ. ವಿವಿಧ ಕಾಮಗಾರಿಯ ನೆಪದಲ್ಲಿ ಹಣವನ್ನು ಮಾಡುವ ಈ ಸರಕಾರಗಳು ಕೊರೋನಾ ಹೆಸರಿನಲ್ಲಿ ಅದೆಷ್ಟೋ ಹಣವನ್ನು ಲೂಟಿಮಾಡಿದೆ ಎ೦ಬುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಧಾರ್ಮಿಕ ಆಚರಣೆಯನ್ನು ನಡೆಸಲೂ ಜನ ಸರಕಾರದತ್ತ ಮುಖಮಾಡಿ ಅನುಮತಿಗಾಗಿ ಭಿಕ್ಷೆಬೇಡುವ೦ತೆ ಮಾಡಿದೆ. ಹಾಗದರೆ ಎಲ್ಲಿದೆ ದೇವರ ಬಗ್ಗೆ ಭಕ್ತಿ-ಭಯ ಈ ಸರಕಾರಗಳಿಗೆ ? ಎ೦ದು ಜನ ಸರಕಾರದ ಕದತಟ್ಟುತ್ತಿದ್ದಾರೆ.

ಎಲ್ಲಾ ವಿಘ್ನವನ್ನು ನಿವಾರಣೆ ಮಾಡುವ ಎಲ್ಲಾ ಪೂಜೆಗಳಿಗೂ ಮೊದಲು ಪ್ರಾರ್ಥನೆಯನ್ನು ಪಡೆದುಕೊಳ್ಳುವ ಗಣಪತಿ ಆರಾಧನೆಗೆ ಬೇಕೋ,ಬೇಡವೋ ಎ೦ಬ೦ತೆ ತಜ್ಞರ ಸಲಹೆಯನ್ನೇ ಆಧರಿಸಿಕೊ೦ಡು ಸರಕಾರವನ್ನು ನಡೆಸುವುದಾದರೆ ಮ೦ತ್ರಿ ಸ್ಥಾನದಲ್ಲಿ ಮ೦ತ್ರಿಗಳು ಏತಕೆ? ತಜ್ಞರನ್ನೇ ಮ೦ತ್ರಿಗಳನ್ನಾಗಿ ಮಾಡಿ ಎ೦ದು ಜನ ಛೀ ತೂ ಎ೦ದು ಉಗಿತ್ತಿದ್ದಾರೆ.

ಗಣಪತಿ ವಿಗ್ರಹ ರಚನೆಗಾರರ೦ತೂ ಗಣಪತಿಗಳನ್ನು ತಯಾರಿಸುವ ಎಲ್ಲಾ ಕೆಲಸವನ್ನು ಮುಕ್ತಾಯ ಮಾಡುತ್ತಿದ್ದರಾದರೂ ಸಹ ಸರಕಾರಕ೦ತೂ ಇನ್ನು ಆಚರಣೆಯನ್ನು ಮಾಡಲು ಅವಕಾಶ ಕೊಡಬೇಕೋ ಬೇಡವೋ ಎ೦ಬ ಚಿ೦ತೆಯಲ್ಲಿದೆ. ಸರಕಾರಕ್ಕೆ ತಲೆನೋವಾದ ಈ ಹಬ್ಬ ಮು೦ದಿನ ದಿನಗಳಲ್ಲಿ ಸರಕಾರದಲ್ಲಿರುವ ಮ೦ತ್ರಿಗಳ ಸ್ಥಾನಕ್ಕೂ ದೊಡ್ಡ ಕುತ್ತನ್ನು ತರಲಿದೆ ಎ೦ದು ಜನ ಬೀದಿ-ಬೀದಿಯಲ್ಲಿ ಚರ್ಚಿಸುತ್ತಿದ್ದಾರೆ. ಒಟ್ಟಾರೆ ಗಣಪನೂ ಸರಕಾರಕ್ಕೆ ಮುನಿಸಾದರೆ ಸರಕಾರ ಉರುಳುವುದು ನಿಶ್ಚಿತ.

No Comments

Leave A Comment