Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಡಾರ್ಲಿಂಗ್ ಕೃಷ್ಣ ‘ಶುಗರ್ ಫ್ಯಾಕ್ಟರಿ’ ಯಲ್ಲಿ ಬಾಬಾ ಸೆಹಗಲ್ ಹ್ಯಾಂಗೋವರ್!

ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ, ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. 7 ವರ್ಷಗಳ ನಂತರ ಬಾಬಾ ಸೆಹಗಲ್ ಮತ್ತೆ ಕನ್ನಡದಲ್ಲಿ ಹಾಡಿದ್ದಾರೆ.

ಜೇಮ್ಸ್ ನಿರ್ದೇಶಕ ಚೇತನ್ ಅವರು ಬರೆದಿರುವ ಈ ಹಾಡಿಗೆ ಖ್ಯಾತ ಗಾಯಕ ಬಾಬಾ ಸೆಹಗಲ್ ಧ್ವನಿಯಾಗಿದ್ದಾರೆ. ಕಫಿರ್ ರಫಿ ಸಂಗೀತ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರೊಡನೆ ಈ‌ ಹಾಡಿಗೆ ಸೋನಾಲ್ ಮಾಂಟೆರೊ ಹೆಜ್ಜೆ ಹಾಕಿದ್ದಾರೆ. ಗಜಕೇಸರಿ ಸಿನಿಮಾದ ಮನೇಲಿ ಅಪ್ಪ ಹಾಡಿಗೆ ಬಾಬಾ ಸೆಹಗಲ್ ಧ್ವನಿಯಾಗಿದ್ದರು.

ಸಿನಿಮಾದಲ್ಲಿ 7 ಹಾಡುಗಳಿದ್ದು, ಹ್ಯಾಂಗೋವರ್ ಸಾಂಗ್ ಅತ್ಯದ್ಭುತವಾಗಿದ್ದು, ಈ ಹಾಡನ್ನು ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ ಎಂದು ನಿರ್ದೇಶಕ ದೀಪಕ್ ಅರಸ್ ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ಹಾಡಿನ ಶೂಟಿಂಗ್ ನಡೆದಿದೆ,  ಧನಂಜಯ್ ನೃತ್ಯ ನಿರ್ದೇಶನದ ಹಾಡಿಗೆ ಕೃಷ್ಣ ಮತ್ತು ಸೋನಾಲ್ ಮಾಂಟೆರಿಯೋ ಹೆಜ್ಜೆ ಹಾಕಿದ್ದಾರೆ. ಸೆಪ್ಟೆಂಬರ್ 10 ಗಣೇಶ ಚತುರ್ಥಿಯ ಶುಭದಿನದಂದು “ಶುಗರ್ ಫ್ಯಾಕ್ಟರಿ” ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ.  ಅದಕ್ಕೂ ಮುನ್ನ ಸಾಂಗ್ ಟೀಸರ್‌ ಬರಲಿದೆ.

ಹಾಸ್ಯ ಮನರಂಜನೆ ಸಿನಿಮಾವನ್ನು ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗಿರೀಶ್ ಆರ್ ನಿರ್ಮಿಸಿದ್ದಾರೆ ಮತ್ತು ಚಿತ್ರದಲ್ಲಿ ಮೆಹಬೂಬ ನಟ ಶಶಿಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ವಿತಿ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಶುಗರ್ ಫ್ಯಾಕ್ಟರಿ ಕಥೆಯನ್ನು ಬರೆದಿರುವ ನಿರ್ದೇಶಕ ದೀಪಕ್ ಅರಸ್, ಶೇ.80 ರಷ್ಟು ಚಿತ್ರೀಕರಣವನ್ನು ಮುಗಿಸಿದ್ದಾರೆ.

No Comments

Leave A Comment