Log In
BREAKING NEWS >
ಮ೦ಗಳವಾರದಿ೦ದ ಪಿತೃ ಪಕ್ಷದ ಆರ೦ಭ...

ಉಡುಪಿ: ಭಾರತೀಯ ಜೀವ ವಿಮಾ ನಿಗಮದ 65ನೇ ವಿಮಾ ಸಪ್ತಾಹದ ಉದ್ಘಾಟನೆ

ಉಡುಪಿ: ಭಾರತೀಯ ಜೀವ ವಿಮಾ ನಿಗಮದ ವಿಭಾಗೀಯ ಕಛೇರಿಯಲ್ಲಿ 65ನೇ ವಿಮಾ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮವು ಸಪ್ಟೆಂಬರ್ 1ರಂದು ವಿಧ್ಯುಕ್ತವಾಗಿ ನೆರವೇರಿತು. ಒಂದುವಾರ ನಡೆಯುವ ವಿಶೇಷ ಕಾರ್ಯಕ್ರಮಗಳಿಗೆ ನಾಂದಿ ಹಾಡಲಾಯಿತು.

ಮಾರುಕಟ್ಟೆ ಪ್ರಬಂಧಕರಾದ ಎನ್. ರಮೇಶ್ ಭಟ್‍ರವರುಎಲ್ಲರನ್ನೂ ಸ್ವಾಗತಿಸಿ ಎಲ್ಲರಿಗೂ 65ನೇ ವಿಮಾ ಸಪ್ತಾಹದ ಶುಭಾಶಯಕೋರಿದರು. ಕೋವಿಡ್‍ನೊಂದಿಗೆ ಬದಲಾದ ಪರಿಸ್ಥಿತಿಯಲ್ಲಿ ನಿಗಮವು ಸಾಮಾಜಿಕಜವಾಬ್ಧಾರಿಯೊಂದಿಗೆ ಸಾಧಿಸಿದ ಮೈಲಿಗಲ್ಲುಗಳನ್ನು ವಿವರಿಸಿದರು. ಇದಕ್ಕೆಕಾರಣಕರ್ತರಾದಎಲ್ಲಾ ಪಾಲಿಸಿದಾರರ, ಸಿಬ್ಬಂದಿ ವರ್ಗದವರಹಾಗೂ ಪ್ರತಿನಿಧಿಗಳ ಕೊಡುಗೆಯನ್ನು ಸ್ಮರಿಸಿದರು.

LIC ಧ್ವಜಾರೋಹಣ ಹಾಗೂ ನಿಗ ಗೀತೆಯೊಂದಿಗೆ ಆರಂಭಗೊಂಡ ಉದ್ಘಾಟನಾಕಾರ್ಯಕ್ರಮದಲ್ಲಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿಯವರಾದ ಶ್ರೀಮತಿ ಬಿಂದು ರಾಬರ್ಟ್‍ರವರು2020-21ನೇ ಆರ್ಥಿಕ ವರ್ಷದಲ್ಲಿನ ನಿಗಮದ ಸಾಧನೆಗಳನ್ನು ಹಾಗೂ ಉಡುಪಿ ವಿಭಾಗದ ಸಾಧನೆಗಳನ್ನು ಎಳೆಎಳೆಯಾಗಿ ವಿವರಿಸಿದರು.

ಸರಕಾರದ ಪಂಚ ವಾರ್ಷಿಕ ಯೋಜನೆಗಳನ್ನೊಳಗೊಂಡಂತೆ, ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ನಿಗಮ ತೊಡಗಿಸಿರುವ ಬೃಹತ್ ಮೊತ್ತಗಳ ಬಗೆಗೂ ವಿವರಿಸಿದರು. ಕ್ಲೈಮ್ ಸೆಟ್ಲ್‍ಮೆಂಟ್‍ನಲ್ಲಿ ಮಂಚೂಣಿಯಲ್ಲಿರುವ ನಿಗಮವು, ಕೋವಿಡ್ ಸಮಯದಲ್ಲಿಯೂತನ್ನ ಹಿರಿತನವನ್ನು ಉಳಿಸಿಕೊಂಡಿದೆ. ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳುವುದರಲ್ಲಿ ಅಗ್ರಗಣ್ಯನೆಂದೆ ನಿಸಿಕೊಂಡಿರುವ ನಿಗಮವು, ಪಾಲಿಸಿದಾರರಿಗೆ ಹಾಗೂ ಪ್ರತಿನಿಧಿಗಳಿಗೆ ಅನುಕೂಲವಾಗಿರುವಂ ಓಂಓಆPPಅನ್ನು ಅಭಿವೃದ್ಧಿಪಡಿಸಿ, ಅಳವಡಿಸಿಕೊಂಡಿರುವುದು ಈ ವರ್ಷದ ಹೆಗ್ಗಳಿಕೆಗಳಲ್ಲೊಂದಾಗಿದೆ.

65ನೇ ವರ್ಷದ ವಿಮಾ ಸಪ್ತಾಹದ ಅಂಗವಾಗಿ ಉಡುಪಿ ವಿಭಾಗದ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ, ಜಿಲ್ಲಾಸ್ಪತ್ರೆಗೆ ವಾಟರ್‍ಹೀಟರ್‍ಕೊಡುಗೆ, ಮುನಿಸಿಪಾಲ್ಟಿಯ ಸ್ವಚ್ಛತಾಕಾರ್ಯಕರ್ತರಿಗೆ ಮಾಸ್ಕ್ ಹಾಗೂ ಕೈಗವುನುಗಳ ಕೊಡುಗೆ, ಆಯುಷ್‍ಆಸ್ಪತ್ರೆಗೆ ಪೀಠೋಪಕರಣಗಳ ಕೊಡುಗೆಗಳೂ ಸೇರಿವೆ.

ಕಾರ್ಯಕ್ರಮವು, ನವವಧುವಿನಂತೆ ಸಿಂಗಾರಗೊಂಡ ವಿಭಾಗೀಯಕಛೇರಿಯಲ್ಲಿಜರುಗಿತು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಿನಲ್ಲಿ 75ವರ್ಷಕ್ಕೂ ಮೇಲ್ಪಟ್ಟ ಶ್ರೀ ಶ್ರೀಶ ಆಚಾರ್ಯ ಹಾಗೂ ಕೇಶವ ಕಲ್ಕುರ ಹೆಸರಿನ ಪಾಲಿಸಿದಾರರನ್ನು ಸನ್ಮಾನಿಸಲಾಯಿತು.

ವಿಕ್ರಯ ಪ್ರಬಂಧಕರಾದ ಕೆ.ಸದಾಶಿವ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ವಿಭಾಗೀಯ ಕಛೇರಿಯ ವಿಮಾ ಪರಿವಾರದಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

No Comments

Leave A Comment