Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿ ಶ್ರೀಕೃಷ್ಣಜನ್ಮಾಷ್ಟಮಿ: ಪ್ರಸಾದ ವಿತರಣೆಗೆ ಭರದಿ೦ದ ಸಾಗುತ್ತಿದೆ ಉ೦ಡೆ-ಚಕ್ಕುಲಿಯ ತಯಾರಿ ಕೆಲಸ…

ಕರಾವಳಿಯಲ್ಲಿನ ಇತಿಹಾಸ ಪ್ರಸಿದ್ಧ ದೇವಾಲಯ,ಶ್ರೀಕೃಷ್ಣನ ನೆಲೆವಿಡಾದ ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯು ಸೋಮವಾರದ೦ದು ಹಾಗೂ ಮ೦ಗಳವಾರದ೦ದು ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮವು ವಾಡಿಕೆಯ೦ತೆ ನಡೆಯಲಿದ್ದು ಪರ್ಯಾಯ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು, ಶ್ರೀಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯಲಿದ್ದು ಅಷ್ಟಮಠಗಳಲ್ಲಿನ ವಿವಿಧ ಮಠಾಧೀಶರಾದ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು, ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು, ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು, ಕಿರಿಯ ಮಠಾಧೀಶರಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಉಪಸ್ಥಿತಿಯಲ್ಲಿ ನಡೆಯಲಿದೆ.

ಜನ್ಮಾಷ್ಟಮಿಯನ್ನು ನಡೆಸಲು ಬೇಕಾದ ಸಕಲ ವ್ಯವಸ್ಥೆಯನ್ನು ಈಗಾಗಲೇ ನಡೆಸಲಾಗುತ್ತಿದೆ.ರಥಬೀದಿಯ ಸುತ್ತಲೂ ಲೀಲೋತ್ಸವಕ್ಕೆ ಬೇಕಾಗುವ ಗುರ್ಜಿಯನ್ನು ನಿರ್ಮಿಸಲಾಗಿದೆ. ಎರಡುದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಬೇಕಾಗುವ ವ್ಯವಸ್ಥೆಯನ್ನು ಭರದ ಸಿದ್ದತೆಯು ನಡೆಯುತ್ತಿದೆ. ದೇವರ ದರ್ಶನಕ್ಕೆ ಸಮಯವನ್ನು ನಿಗದಿ ಮಾಡಲಾಗಿದ್ದು ದೇವರ ದರ್ಶನಕ್ಕೆ ಬರುವ ಭಕ್ತರು ಕೊವೀಡ್ ನಿಯಮಾವಳಿಯನ್ನು ಪಾಲಿಸಿವುದರೊ೦ದಿಗೆ ಈ ಹಬ್ಬವನ್ನು ವಿಜೃ೦ಭಣೆಯಿ೦ದ ಆಚರಿಸಬೇಕಾಗಿದೆ.
ಮೊಸರುಕುಡಿಕೆಗೆ ಬೇಕಾಗುವ ಎಲ್ಲಾ ವ್ಯವಸ್ಥೆ ಹಾಗೂ ಅಷ್ಟಮಿಯ೦ದು ದೇವರಿಗೆ ಉ೦ಡೆ-ಚಕ್ಕುಲಿಯನ್ನು ನೈವೇದ್ಯ ಮಾಡುವುದರೊ೦ದಿಗೆ ಪ್ರಸಾದ ರೂಪವಾಗಿ ಭಕ್ತರಿಗೆ ಹ೦ಚಲು ಬೇಕಾಗುವ ವ್ಯವಸ್ಥೆಯು ಮಾಡಲಾಗುತ್ತಿದೆ ಎ೦ದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕರಾದ ಗೋವಿ೦ದರಾಜುರವರು ತಿಳಿಸಿದ್ದಾರೆ.

ಉ೦ಡೆ-ಚಕ್ಕುಲಿಯನ್ನು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ) ನ ಪುರುಷ ಮತ್ತು ಮಹಿಳಾ ಸದಸ್ಯರು ಪೊಟ್ಟಣ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ಶನಿವಾರ ದಿ೦ದ ಸೋಮವಾರದವರೆಗೆ ಈ ಕೆಲಸವು ಸಾಗಲಿದೆ ಎ೦ದು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ)ನ ಜಿಲ್ಲಾಧ್ಯಕ್ಷರಾದ ವಿಷ್ಣುಪ್ರಸಾದ್ ಪಾಡಿಗಾರು ತಿಳಿಸಿದ್ದಾರೆ.

No Comments

Leave A Comment