Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಆ.30,31ರ೦ದು ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ- ಲಕ್ಷ ತುಳಸಿ ಅರ್ಚನೆ-ದೇವರ ದರ್ಶನಕ್ಕೆ ಭಕ್ತರಿಗೆ ಸಮಯ ನಿಗದಿ

ಉಡುಪಿ:ಆ.25: ಶ್ರೀಕೃಷ್ಣ ಮಠದಲ್ಲಿ ಎಂದಿನಂತೆ ಪೂಜೆಗಳು ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿ (ಆಗಸ್ಟ್ 30, ಸೋಮವಾರ) ಪರ್ವಕಾಲದಲ್ಲಿ ಬೆಳಿಗ್ಗೆ ಮಹಾಪೂಜೆಯ ಮೊದಲು ಶ್ರೀಕೃಷ್ಣ ದೇವರಿಗೆ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ವಿಶೇಷವಾಗಿ ಲಕ್ಷ ತುಳಸಿ ಅರ್ಚನೆ ನಡೆಸಲಿರುವರು. ವಿಪ್ರ ಬಾಂಧವರು ತುಳಸಿ ಅರ್ಚನೆಯಲ್ಲಿ ಪಾಲ್ಗೊಳ್ಳುವರು. ತುಳಸಿ, ಪುಷ್ಪ ನೀಡಬಯಸುವವರು ಆಗಸ್ಟ್ 29, ಭಾನುವಾರ ಸಂಜೆಯೊಳಗೆ ಶ್ರೀಮಠಕ್ಕೆ ಒಪ್ಪಿಸಬಹುದು.

ಆಗಸ್ಟ್‌ 30, ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸೂರ್ಯಶಾಲೆಯಲ್ಲಿ ಸ್ಯಾಕ್ಸೋಫೋನ್, ನಾಗಸ್ವರ ಮತ್ತು ಕೊಳಲು ವಾದನ ಕ‌ಛೇರಿ ನಡೆಯಲಿದೆ.

ಶ್ರೀಕೃಷ್ಣ ಮಠದಲ್ಲಿ ಆಗಸ್ಟ್ 30, ಸೋಮವಾರ ಶ್ರೀಕೃಷ್ಣ ಜಯಂತಿ ದಿನದಂದು ರಾತ್ರಿ 12.30ರ ನಂತರ ಅರ್ಘ್ಯ ಪ್ರದಾನಕ್ಕೆ ಭಕ್ತರಿಗೆ ಅವಕಾಶವಿದ್ದು, ಕನಕನ ಕಿಂಡಿ ಎದುರುಗಡೆ ಮತ್ತು ಮಧ್ವ (ವಸಂತ) ಮಂಟಪದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಶ್ರೀಕೃಷ್ಣ ಜಯಂತಿ ಮತ್ತು ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ದಿನದಂದು ಶ್ರೀಕೃಷ್ಣ ದರ್ಶನವಾಗಬೇಕೆಂಬ ಶ್ರೀಕೃಷ್ಣ ಭಕ್ತರ ಹಂಬಲದಂತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 30, ಸೋಮವಾರದಂದು ಬೆಳಿಗ್ಗೆ 08.00 ಗಂಟೆಯಿಂದ ಸಂಜೆ 06.00 ಗಂಟೆಯವರೆಗೆ ನಿರಂತರ ಶ್ರೀಕೃಷ್ಣ ದರ್ಶನದ ಅವಕಾಶವಿರುತ್ತದೆ. ಆಗಸ್ಟ್ 31, ಮಂಗಳವಾರದಂದು ಬೆಳಗ್ಗೆ 7.30ರಿಂದ ಮಧ್ಯಾಹ್ನ 01.00 ಗಂಟೆವರೆಗೆ, ನಂತರ ಶ್ರೀದೇವರ ರಥೋತ್ಸವದ ಬಳಿಕ ಸುಮಾರು ಸಂಜೆ 5.00 ಗಂಟೆಯಿಂದ ಶ್ರೀಕೃಷ್ಣ ದರ್ಶನದ ಅವಕಾಶವಿರುತ್ತದೆ.

ಸುದರ್ಶನ ಪ್ರವೇಶ ಪತ್ರ ಹೊಂದಿದ ಭಕ್ತಾದಿಗಳು ಉತ್ತರ ಮತ್ತು ದಕ್ಷಿಣ ದ್ವಾರದಲ್ಲಿ ಪ್ರವೇಶಕ್ಕೆ ಅವಕಾಶವಿದ್ದು, ಯಾತ್ರಾರ್ಥಿಗಳು ವಿಶ್ವಪಥದ ಮೂಲಕ ಶ್ರೀ ದೇವರ ಪಡೆದು ಸಹಕರಿಸಬೇಕಾಗಿ ಶ್ರೀಮಠದ ಪ್ರಕಟಣೆ ತಿಳಿಸಿದೆ.

ಶ್ರೀಕೃಷ್ಣ ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಪಾಲಿಸಿ, ಸರಕಾರದ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಶ್ರೀದೇವರ ದರ್ಶನ ಪಡೆದು ಸಹಕರಿಸಬೇಕಾಗಿ ಪ್ರಕಟಣೆ ತಿಳಿಸಿದೆ.

No Comments

Leave A Comment