Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಅತ್ಯಂತ ಅಪಾಯದಲ್ಲಿ ಕಾಬೂಲ್‌ ವಿಮಾನ ನಿಲ್ದಾಣ: ಉಗ್ರ ದಾಳಿಯ ಎಚ್ಚರಿಕೆ ನೀಡಿದ ಬ್ರಿಟನ್

ಕಾಬೂಲ್‌: ಕಾಬೂಲ್‌ ವಿಮಾನ ನಿಲ್ದಾಣ ಅತ್ಯಂತ ಅಪಾಯದಲ್ಲಿದ್ದು, ಉಗ್ರ ದಾಳಿ ಬೆದರಿಕೆ ಇರುವುದರಿಂದ ಭದ್ರತಾ ದೃಷ್ಟಿಯಿಂದ ಅಫ್ಗಾನಿಸ್ತಾದ ಕಾಬೂಲ್‌ನಲ್ಲಿರುವ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬಾರದು ಎಂದು ಬ್ರಿಟನ್ ಸರ್ಕಾರ ತನ್ನ ನಾಗರಿಕರಿಗೆ ಸೂಚನೆ ನೀಡಿದೆ.

ವಿದೇಶಿ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಅತಂತ್ರವಾಗಿದೆ ಎಂದು ಹೇಳಿದ್ದು, ಬ್ರಿಟಿಷ್ ನಾಗರಿಕರು ಮತ್ತು ಇತರ ಸ್ಥಳಾಂತರಗೊಂಡವರು ಸುರಕ್ಷಿತ ಸ್ಥಳಗಳಿಗೆ ತೆರಳಿ, ಮುಂದಿನ ಸೂಚನೆ ಬರುವವರೆಗೆ ಅಲ್ಲಿಯೇ ಇರಿ ಎಂದು ಸೂಚನೆ ನೀಡಿದೆ.

ಈ ಬೆಳವಣಿಗೆಯು ಇಸ್ಲಾಮಿಕ್ ಸ್ಟೇಟ್(ISIS) ಅಫ್ಘಾನಿಸ್ತಾನದ ಅಂಗಸಂಸ್ಥೆಯ ಬೆದರಿಕೆಗಳಿಗೆ ಸಂಬಂಧಿಸಿದೆ, ಇದನ್ನು ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಅಥವಾ ISIS-K ಎಂದು ಕರೆಯುತ್ತಾರೆ, ಇದು ಆತ್ಮಹತ್ಯಾ ಬಾಂಬ್ ದಾಳಿ ಮತ್ತು ಕಾರ್ ಬಾಂಬ್‌ ದಾಳಿ ನಡೆಸುವುದಕ್ಕೆ ಹೆಸರುವಾಸಿಯಾಗಿದೆ ಎಂದು ತಿಳಿಸಿದೆ.

ವಿಮಾನ ನಿಲ್ದಾಣ ಸೇರಿದಂತೆ ಕಾಬೂಲ್‌ನ ಪರಿಸ್ಥಿತಿ ತ್ವರಿತವಾಗಿ ಬದಲಾಗುತ್ತಲೇ ಇದೆ. ನೀವು ಕಾಬೂಲ್ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಡಿ. ಒಂದು ವೇಳೆ ಈಗಾಗಲೇ ವಿಮಾನ ನಿಲ್ದಾಣದ ಪ್ರದೇಶದಲ್ಲಿದ್ದರೆ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ ಮತ್ತು ಹೆಚ್ಚಿನ ಸಲಹೆಗಾಗಿ ನಿರೀಕ್ಷಿಸಿ ಎಂದು ಎಫ್‌ಸಿಡಿಒ ಹೇಳಿದೆ.

ಅಫ್ಗಾನಿಸ್ತಾನದಿಂದ ಪಲಾಯನ ಮಾಡಲು ಕಾಬೂಲ್‌ ವಿಮಾನ ನಿಲ್ದಾಣದತ್ತ ಬರುತ್ತಿರುವವರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಲು ಯೋಜಿಸುತ್ತಿರುವುದಾಗಿ ಬ್ರಿಟನ್‌ ರಕ್ಷಣಾ ಸಚಿವ ಜೇಮ್ಸ್ ಹೆಪ್ಪಿ ಆತಂಕ ವ್ಯಕ್ತಪಡಿಸಿದ್ದಾರೆ.

No Comments

Leave A Comment