Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಕಾಬೂಲ್ ವಿಮಾನ ನಿಲ್ದಾಣ ಸುತ್ತುವರೆದ ತಾಲಿಬಾನಿಗಳು, ಗುಂಡಿನ ದಾಳಿಯಲ್ಲಿ 7 ಮಂದಿ ಸಾವು

ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಏರ್ ಲಿಫ್ಟ್ ಕಾರ್ಯಾಚರಣೆ ವೇಳೆ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಕನಿಷ್ಠ7 ಮಂದಿ ಆಫ್ಘನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಬ್ರಿಟನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದ್ದು, ಈ ಕುರಿತಂತೆ ಟ್ವೀಟ್ ಮಾಡಿರುವ ಸಚಿವಾಲಯ, ‘ಕಾಬೂಲ್ ವಿಮಾನ ನಿಲ್ದಾಣದ ಸಮೀಪ ನಡೆದ ಸಂಘರ್ಷದಲ್ಲಿ ಏಳು ಅಫ್ಘಾನ್ ನಾಗರಿಕರು ಸಾವನ್ನಪ್ಪಿದ್ದಾರೆ. ನಮ್ಮ ಪ್ರಾಮಾಣಿಕ ಆಲೋಚನೆಗಳು ಕಾಬೂಲ್‌ನಲ್ಲಿ ಜನಸಂದಣಿಯಲ್ಲಿ ಸಾವನ್ನಪ್ಪಿದ ಏಳು ಅಫ್ಘಾನ್ ನಾಗರಿಕರ ಕುಟುಂಬಗಳೊಂದಿಗೆ ಇವೆ ಎಂದು ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಅಂತೆಯೇ ಆಫ್ಘಾನಿಸ್ತಾನದಲ್ಲಿ  ಪರಿಸ್ಥಿತಿಗಳು ಅತ್ಯಂತ ಸವಾಲಾಗಿ ಉಳಿದಿವೆ. ಆದರೂ ಸಾಧ್ಯವಾದಷ್ಟು ಸುರಕ್ಷಿತವಾಗಿ ಪರಿಸ್ಥಿತಿಯನ್ನು ನಿರ್ವಹಿಸಲು ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಅಂತೆಯೇ ಇದೇ ವಿಚಾರವಾಗಿ ಮಾತನಾಡಿರುವ ಬ್ರಿಟಿಷ್ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್,  “ಆಗಸ್ಟ್ 31 ರ ಯುಎಸ್ ಗಡುವಿನ ಮೊದಲು” ಯಾವುದೇ ರಾಷ್ಟ್ರವು ಎಲ್ಲರನ್ನು ಹೊರಹಾಕಲು ಸಾಧ್ಯವಿಲ್ಲ. ಬಹುಶಃ ಅಮೆರಿಕನ್ನರಿಗೆ ಹೆಚ್ಚು ಕಾಲ ಉಳಿಯಲು ಅನುಮತಿ ನೀಡಬಹುದು ಮತ್ತು ಅವರು ಹಾಗೆ ಮಾಡಿದರೆ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಹೇಳಿದ್ದಾರೆ.

ಇನ್ನು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ತಾಲಿಬಾನ್ ಅಧಿಕಾರವನ್ನು ಹಿಂಪಡೆದ ನಂತರ ವಾರದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸ್ಥಳಾಂತರಿಸಲು ಹೆಚ್ಚೆಚ್ಚು ವಿಮಾನಗಳನ್ನು ರವಾನೆ ಮಾಡುತ್ತಿವೆ. ಇದರ ಬೆನ್ನಲ್ಲೇ ಭಾರತ ಸರ್ಕಾರ ಕೂಡ ತನ್ನ ವಾಯುಪಡೆ ವಿಮಾನಗಳನ್ನು ಮತ್ತು ಏರ್ ಇಂಡಿಯಾ ಪ್ರಯಾಣಿಕ ವಿಮಾನಗಳನ್ನು ಕಾಬೂಲ್ ಗೆ ರವಾನಿಸಿದೆ.

No Comments

Leave A Comment