Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಹಿರಿಯ ನಟಿ ಚಿತ್ರಾ ಹೃದಯಾಘಾತದಿಂದ ನಿಧನ

ಚೆನ್ನೈ: ಆ 21. ಮಲಯಾಲಂ ಸೇರಿ ಬಹುಭಾಷೆಯಲ್ಲಿ ನಟಿಸಿರುವ ನಟಿ ಚಿತ್ರಾ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 56 ವರ್ಷದರಾಗಿದ್ದ ಅವರು ಚೆನ್ನೈನ ಸಾಲಿಗ್ರಾಮಂನಲ್ಲಿ ವಾಸಿಸುತ್ತಿದ್ದರು.

ಚಿತ್ರಾ ಅವರು ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಅವರು ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಮೂಲತಃ ಕೇರಳದವರಾಗಿದ್ದ ಅವರು ದಕ್ಷಿಣ ಭಾರತದ ಎಲ್ಲ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದರು. ಹಿಂದಿ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು. ಕನ್ನಡದ ‘ಸುಂದರ ಸ್ವಪ್ನಗಳು’, ‘ಕೃಷ್ಣ ಮೆಚ್ಚಿದ ರಾಧೆ’, ‘ಅಜಯ್​ ವಿಜಯ್​’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು.

ಮೂಲತಃ ಕೇರಳದವರಾಗಿದ್ದ ಅವರು ದಕ್ಷಿಣ ಭಾರತದ ಎಲ್ಲ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದರು. ಹಿಂದಿ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು. ಕನ್ನಡದ ‘ಸುಂದರ ಸ್ವಪ್ನಗಳು’, ‘ಕೃಷ್ಣ ಮೆಚ್ಚಿದ ರಾಧೆ’, ‘ಅಜಯ್​ ವಿಜಯ್​’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು.

ಮಲಯಾಳಂನ ಪ್ರಸಿದ್ಧ ಚಿತ್ರಗಳಲ್ಲಿ ಕಾಲಿಕ್ಕಲಂ (1990), ದೇವಾಸುರಂ (1993) ಮತ್ತು ಪಥಮುದಯಂ (1985) ಸೇರಿವೆ. ಅವರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1983 ರಲ್ಲಿ ಪ್ರೇಮ್ ನಜೀರ್ ಮತ್ತು ಮೋಹನ್ ಲಾಲ್ ಜೊತೆ ಆಟ ನಟಿಸಿದ್ದರು.

1990 ರಲ್ಲಿ ವಿಜಯರಾಘವನನ್ನು ವಿವಾಹವಾದರು.ಮಹಾಲಕ್ಷ್ಮಿ ಎಂಬ ಮಗಳು ಇದ್ದು , ವಿವಾಹದ ಬಳಿಕ ಅವರು ಚಲನಚಿತ್ರಗಳಿಂದ ನಿವೃತ್ತರಾದರು.

No Comments

Leave A Comment