Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

2ನೇ ಟೆಸ್ಟ್ ಪಂದ್ಯ: ಟೀಂ ಇಂಡಿಯಾ 364 ರನ್ ಗೆ ಆಲೌಟ್; ಇಂಗ್ಲೆಂಡ್ 119/3, ಭಾರತಕ್ಕೆ 245 ರನ್ ಮುನ್ನಡೆ!

ಲಾರ್ಡ್ಸ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 364 ರನ್ ಗಳಿಗೆ ಆಲೌಟ್ ಆಗಿದೆ.

ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಎರಡನೇ ದಿನದಾಟಕ್ಕೆ 3 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ. ಇನ್ನು ಇಂಗ್ಲೆಂಡ್ 245 ರನ್ ಗಳ ಹಿನ್ನಡೆ ಅನುಭವಿಸಿದೆ.

ಇಂಗ್ಲೆಂಡ್ ಪರ ರೋರ್ರಿ ಬರ್ನ್ಸ್ 49, ಡೋಮ್ ಸಿಬ್ಲೇ 11 ಜೋ ರೂಟ್ ಅಜೇಯ 48 ಮತ್ತು ಜಾನಿ ಬೈರ್ಸ್ಟೋವ್ ಅಜೇಯ 6 ರನ್ ಗಳಿಸಿದ್ದು ಮೂರನೇ ದಿನದಾಟವನ್ನು ಆರಂಭಿಸಲಿದ್ದಾರೆ.

ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 83, ಕೆಎಲ್ ರಾಹುಲ್ 129, ವಿರಾಟ್ ಕೊಹ್ಲಿ 42, ರಿಷಬ್ ಪಂತ್ 37, ರವೀಂದ್ರ ಜಡೇಜಾ 40 ರನ್ ಬಾರಿಸಿದ್ದಾರೆ.

No Comments

Leave A Comment