Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಬೆಂಗಳೂರಿನಲ್ಲಿ 80 ಕೋಟಿ ಬೆಲೆಬಾಳುವ 80 ಕೆ.ಜಿ ಅಂಬರ್ಗ್ರಿಸ್ ವಶಕ್ಕೆ

ಬೆಂಗಳೂರು: ಬೆಂಗಳೂರಿನ ಕೇಂದ್ರ ಕ್ರೈಮ್ ಬ್ರಾಂಚ್ (ಸಿಸಿಬಿ) ಪೊಲೀಸರು 80 ಕೆ.ಜಿಯಷ್ಟು ಅಂಬರ್ಗ್ರಿಸ್ ನ್ನು ವಶಕ್ಕೆ ಪಡೆದಿದ್ದಾರೆ.

ಐದು ಮಂದಿಯಿಂದ ಅಂಬರ್ಗ್ರಿಸ್ ನ್ನು ವಶಕ್ಕೆ ಪಡೆಯಲಾಗಿದ್ದು, ನಿಷೇಧಿತ ಅಂಬರ್ಗ್ರಿಸ್ ನ್ನು ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನ ನಿವಾಸಿಗಳಾದ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮುಜೀಬ್ ಪಾಶಾ (48) ಮೊಹಮ್ಮದ್ ಅಲಿಯಾಸ್ ಮುನ್ನ (45) ಗುಲಾಬ್ ಚಂದ್ ಅಲಿಯಾಸ್ ಗುಡ್ಡು (40) ಹಾಗೂ ಸಂತೋಷ್ (31) ಅವರನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ರಾಯಚೂರಿನ ಜಗನ್ನಾಥಾಚಾರ್ (52) ನ್ನೂ ಬಂಧಿಸಲಾಗಿದೆ.

ಮಾಹಿತಿಯ ಆಧಾರದಲ್ಲಿ ಸಿಸಿಬಿ ಗೊಡೋನ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಅಂಬರ್ಗ್ರಿಸ್ ನ್ನು ವಶಕ್ಕೆ ಪಡೆದಿದ್ದಾರೆ. ಭಾರತದಲ್ಲಿ ವನ್ಯಜೀವಿ ರಕ್ಷಣೆ ಕಾಯ್ದೆಯಡಿ ಅಂಬರ್ಗ್ರಿಸ್ ನ ಮಾರಾಟ ಹಾಗೂ ದಾಸ್ತಾನನ್ನು ನಿಷೇಧಿಸಲಾಗಿದೆ.

No Comments

Leave A Comment