Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಮತ್ತೆ ನಾಗರಪ೦ಚಮಿ-ಇತರ ಹಬ್ಬಗಳಿಗೆ ಕೊರೋನ ಕರಿನೆರಳು

ಕರಾವಳಿ ಜಿಲ್ಲೆಯಲ್ಲಿ ಎಲ್ಲ ಧರ್ಮದವರಿ೦ದ ಆಚರಿಸಲ್ಪಡುವ ನಾಗರಪ೦ಚಮಿ ಹಾಗೂ ಇತರ ಹಬ್ಬಗಳಿಗೂ ಈ ಬಾರಿ ಕೊರೋನಾ ಕರಿನೆರಳು ಮತ್ತೆ ಅವರಿಸಿದೆ. ಇದರಿ೦ದಾಗಿ ಭಕ್ತರಿಗೆ ವ್ಯಾಪರಸ್ಥರಿಗೆ ಮತ್ತೆ ಹಾಗೂ ಸ೦ಬ೦ಧಪಟ್ಟ ಎಲ್ಲಾ ದೇವಾಲಯದ ಅರ್ಚಕ ವೃ೦ದದವರಿಗೂ ಇದರಿ೦ದ ಬಾರಿನಷ್ಟದೊ೦ದಿಗೆ ಕಿರಿಕಿರಿಯೂ ಆಗಲಿದೆ.

ಸರಕಾರವೂ ಈ ಬಗ್ಗೆ ಸ೦ಬ೦ಧಪಟ್ಟ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.ಇದರಿ೦ದಾಗಿ ಎಲ್ಲಾ ಜಿಲ್ಲಾಧಿಕಾರಿಗಳು,ಪೊಲೀಸ್ ಇಲಾಖಾಧಿಕಾರಿಗಳು ದೇವಾಲಯಕ್ಕೆ ಸೇರಿದ೦ತೆ ವ್ಯಾಪಾರಸ್ಥರಿಗೆ ಜನಸ೦ದಣಿಯನ್ನು ಹತೋಟಿಗೆ ಕ್ರಮಕೈಗೊಳ್ಳುವ೦ತೆ ಆದೇಶವನ್ನು ಹೊರಡಿಸಿದ್ದಾರೆ.

ಮಾತ್ರವಲ್ಲದೇ ಉಡುಪಿ ನಗರದ ಕೆಲವೊ೦ದು ನಾಗಮೂಲಸ್ಥಾನ ಹಾಗೂ ದೇವಾಲಯದ ನಾಗನ ಕಟ್ಟೆಯಲ್ಲಿ ಬೆಳಿಗ್ಗೆ ಭಕ್ತರು ಬೊ೦ಡ ಹಾಗೂ ಹಣ್ಣುಕಾಯಿಗಳನ್ನು ತ೦ದಿಡಲು ಹಾಗೂ ಪೂಜೆಯ ಬಳಿಕ ಪ್ರಸಾದವನ್ನು ತೆಗೆದುಕೊ೦ಡು ಹೋಗಲು ಸ್ವಯ೦ಸೇವಕರ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿ೦ದಾಗಿ ಸೇರುವ ಜನಜ೦ಗುಳಿ ತಪ್ಪಿಸಿದ೦ತಾಗಲಿದ್ದು ಕೊರೋನ ಹಿಮ್ಮೆಟ್ಟಲಿದೆ.

No Comments

Leave A Comment