Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಬ್ಲೂಟೂತ್ ಹೆಡ್ ಫೋನ್‌ ಸ್ಪೋಟಗೊಂಡು ಯುವಕ ಸಾವು

ಜೈಪುರ್: ಬ್ಲೂಟೂತ್‌ ಹೆಡ್‌ ಫೋನ್‌ ಯುವಕನೊಬ್ಬನ ಪ್ರಾಣವನ್ನೇ ತೆಗೆದಿದೆ. ಬ್ಲೂಟೂತ್ ಹೆಡ್ ಫೋನ್ಸ್‌ ಸಹಾಯದಿಂದ ಫೋನ್‌ ನಲ್ಲಿ ಮಾತನಾಡುತ್ತಿದ್ದಾಗ ದಿಢೀರ್‌ ಸ್ಫೋಟ ಸಂಭವಿಸಿ 28 ವರ್ಷದ ಯುವಕ ಸಾವನ್ನಪ್ಪಿದ್ದಾನೆ.

ಈ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ನಡೆದಿದೆ. ಜೈಪುರದ ಚೋಮು ಪ್ರದೇಶದ ಉದಯ್‌ ಪುರಿಯಾ ಗ್ರಾಮದ ರಾಕೇಶ್ ಕುಮಾರ್ ನಗರ್‌, ತನ್ನ ಬ್ಲೂಟೂತ್ ಹೆಡ್ ಫೋನ್ ಬಳಸಿ ಫೋನಿನಲ್ಲಿ ಮಾತನಾಡುತ್ತಿದ್ದಾಗ, ಹೆಡ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದರಿಂದ ಯುವಕ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆತ ಮೃತಪಟ್ಟಿದ್ದಾನೆ. ಈ ಸಂಬಂಧ ಡಾ. ಎಲ್.ಎನ್.ರುಂಡ್ಲಾ ಪ್ರತಿಕ್ರಿಯಿಸಿ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದ್ದಾರೆ.

ಬ್ಲೂ ಟೂತ್ ಇಯರ್‌ಫೋನ್‌ಗಳು ಸ್ಫೋಟಗೊಂಡಿರುವುದು ದೇಶದಲ್ಲಿ ಇದೇ ಮೊದಲು ಎಂದು ಅಧಿಕಾರಿಗಳು ಹೇಳುತ್ತಾರೆ. ಬಹುಶಃ ಸ್ಪೋಟ ಸಂಭವಿಸಿದ ಸಮಯದಲ್ಲಿ ಎರಡು ಕಿವಿಗಳಿಗೂ ಗಾಯಗಳಾಗಿವೆ.

ಏತನ್ಮಧ್ಯೆ, ಬ್ಲೂಟೂತ್ ಇಯರ್‌ ಫೋನ್‌ಗಳು ಸ್ಫೋಟಗೊಂಡು ಯುವಕ ಸಾವನ್ನಪ್ಪಿರುವ ಸುದ್ದಿ ಸಂಚಲನ ಸೃಷ್ಟಿಸಿದೆ.

No Comments

Leave A Comment