Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ : ಉಡುಪಿ CEN ಅಪರಾಧ ಪೊಲೀಸರಿಂದ ಇಬ್ಬರ ಬಂಧನ : ಸೊತ್ತುಗಳು ವಶ….!

ಉಡುಪಿ : ನಗರದಲ್ಲಿ ಅಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು CEN ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.ಮತ್ತು ಅವರ ಬಳಿ ಇದ್ದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಮಂಗಳೂರು ಸೋಮೇಶ್ವರದ ನಿವಾಸಿ ಕಾರ್ತಿಕ್ ದೇವಾಡಿಗ ಮತ್ತು ತೇಜಸ್ ಪೂಜಾರಿ ಎಂದು ತಿಳಿದು ಬಂದಿದೆ.

ಆರೋಪಿಗಳ ಬಳಿ ಇದ್ದ 1ಕಿಲೋ,226 ಗ್ರಾಂ ಗಾಂಜಾವನ್ನು ಮತ್ತು ಎರಡು ಮೊಬೈಲ್ ಫೋನ್ ಮತ್ತು ಆಟೋ ರಿಕ್ಷಾ ವನ್ನು ಸೆನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಐ.ಪಿ.ಎಸ್. ಇವರ ನಿರ್ದೇಶನದಂತೆ ,ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ,ಉಡುಪಿ ಸೆನ್ ಅಪರಾಧ ದಳದ ನಿರೀಕ್ಷಕರಾದ ಮಂಜುನಾಥ್ ಹಾಗೂ ಅವರ ತಂಡದ ಪಿ.ಎಸ್.ಐ ಲಕ್ಷಣ್ ಎ.ಎಸ್.ಐ ಕೇಶವ್ ಗೌಡ ಮತ್ತು ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ಪ್ರವೀಣ್, ರಾಘವೇಂದ್ರ ಉಪ್ಪೂರು,ಪ್ರಸನ್ನ ಸಾಲಿಯಾನ್ ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

No Comments

Leave A Comment