Log In
BREAKING NEWS >
ಮ೦ಗಳವಾರದಿ೦ದ ಪಿತೃ ಪಕ್ಷದ ಆರ೦ಭ...

ಮಂಗಗಳನ್ನು ಕೊಂದು ರಸ್ತೆಯಲ್ಲಿ ಬಿಸಾಡಿದ್ದ ಕಿಡಿಗೇಡಿಗಳು…!

ಹಾಸನ: 50ಕ್ಕೂ ಹೆಚ್ಚು ಮಂಗಗಳನ್ನು ಹೊಡೆದು ಕೊಂದು ಹಾಕಿರುವ ಘಟನೆ, ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿ ಚೌಡನಹಳ್ಳಿ ಗ್ರಾಮದ ಬಳಿ ನಡೆದಿದೆ.

ಯಾರೋ ಕಿಡಿಗೇಡಿಗಳು ಮಂಗಗಳನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿಸಿ  ಬಿಸಾಡಿದ್ದರು. ತಡರಾತ್ರಿ ಚೌಡೇನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ಬಿದ್ದಿದ್ದ ಗೋಣಿಚೀಲಗಳನ್ನು ಕಂಡ ಸ್ಥಳೀಯರು ಗೋಣಿಚೀಲ ಬಿಚ್ಚಿ ನೋಡಿದಾಗ ಹೇಯ ಕೃತ್ಯ ಬಯಲಾಗಿದೆ.

ಚೀಲದಲ್ಲಿ 50ಕ್ಕೂ ಹೆಚ್ಚು ಮಂಗಗಳು ಮೃತಪಟ್ಟಿದ್ದರೆ ಬದುಕಿ ಉಳಿದಿದ್ದ ಮಂಗಗಳಿಗೆ ಗ್ರಾಮದ ಯುವಕರು ನೀರು ಕುಡಿಸಿ ಬಿಟ್ಟರು.

No Comments

Leave A Comment