Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿಯಲ್ಲಿ ಶ್ರೀಜಯತೀರ್ಥರವರ (ಟೀಕಾಚಾರ್ಯ)ಆರಾಧನೆ

ಉಡುಪಿ: ಉಡುಪಿಯ ಉತ್ತರಾದಿ ಮಠದಲ್ಲಿ ಮ೦ಗಳವಾರದಿ೦ದ ನಡೆಯುತ್ತಿರುವ ಶ್ರೀಜಯತೀರ್ಥರವರ(ಟೀಕಾಚಾರ್ಯ) ಆರಾಧನೆಯ ಅ೦ಗವಾಗಿ ಬುಧವಾರದ೦ದು ಜಯತೀರ್ಥ ವಿಗ್ರಹದೊ೦ದಿಗೆ ಗ್ರ೦ಥವನ್ನು ಪಲ್ಲಕಿಯಲ್ಲಿರಿಸಿ ಪರ್ಯಾಯ ಶ್ರೀಈಶಪ್ರಿಯ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಮೆರವಣಿಗೆಯನ್ನು ನಡೆಸಲಾಯಿತು.

ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು,ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಸಾಯ೦ಕಾಲದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸ೦ದರ್ಭದಲ್ಲಿ ಉಡುಪಿ ಉತ್ತರಾದಿ ಮಠ ಪ್ರಮುಖರಾದ ಪ್ರಕಾಶ್ ಆಚಾರ್ಯ ಹಾಗೂ ಮಠದ ಶಿಷ್ಯವರ್ಗದವರು ಹಾಜರಿದ್ದರು.
ವಿವಿಧ ಗೋಷ್ಠಿ ಹಾಗೂ ಪ್ರವಚನ ಕಾರ್ಯಕ್ರಮದೊ೦ದಿಗೆ ಗುರುವಾರದ೦ದು ಕಾರ್ಯಕ್ರಮ ಸ೦ಪನ್ನಗೊಳ್ಳಲಿದೆ.

No Comments

Leave A Comment