Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಕೆಡೆಟ್‌ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಪ್ರಿಯಾ ಮಲಿಕ್

ಹಂಗೇರಿ: ಭಾರತ ಮತ್ತೊಂದು ಚಿನ್ನದ ಪದಕ ಗೆದ್ದಿದೆ. ಆದರೆ ಗೆದ್ದಿರುವುದು ಟೋಕಿಯೋದ ಒಲಂಪಿಕ್ಸ್ ನಲ್ಲಿ ಅಲ್ಲ. ಆದರೆ ಹಂಗೇರಿಯಲ್ಲಿ ನಡೆದ ಕೆಡೆಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ.

ಟೋಕಿಯೊ ಒಲಂಪಿನ್ಸ್ ನ ನಡುವೆ ಕೆಡೆಟ್‌ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಪ್ರಿಯಾ ಮಲಿಕ್ ಭಾರತೀಯರು ಹೆಮ್ಮೆ ಪಡುವುದಕ್ಕೆ ಮತ್ತೊಂದು ಕಾರಣವಾಗಿದ್ದಾರೆ.

ಮಹಿಳೆಯರ 73 ಕೆ.ಜಿ ತೂಕದ ವಿಭಾಗದ ಫೈನಲ್ ಪಂದ್ಯದಲ್ಲಿ ಬೆಲಾರಸ್ ನ ಕುಸ್ತಿ ಪಟು  ಕ್ಸೆನಿಯಾ ಪಟಪೋವಿಚ್ ಅವರನ್ನು 5-0 ಅಂತರದಿಂದ ಮಣಿಸಿದ್ದಾರೆ.

ಟೋಕಿಯೋ ಒಪಂಪಿಕ್ಸ್ ನಲ್ಲಿ ಮೀರಾಬಾಯ್ ಚನು ಅವರು ಮಹಿಳೆಯರ 49 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಬೆನ್ನಲ್ಲೇ ಭಾರತಕ್ಕೆ ಕೆಡೆಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

No Comments

Leave A Comment