Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಶ್ರೀ ಕೃಷ್ಣ ದೇವರ ಪರಿಚಾರಕ ಗಣೇಶ ಭಟ್ ನಿಧನ

ಉಡುಪಿಯ ಮಣ್ಣೋಳಿಗುಜ್ಜಿಯ ಗಣೇಶ ಭಟ್ (50) ರವರು ಭಾನುವಾರ(ಜುಲಾಯಿ 25)ದ೦ದು ಹೃದಯಾಘತದಿ೦ದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಉಡುಪಿಯ ಶ್ರೀ ಕೃಷ್ಣ ದೇವರ ಒಬ್ಬ ಶ್ರೇಷ್ಠ ಪರಿಚಾರಕ, ಅಪಾರ ಕಾರ್ಯ ಸಾಮರ್ಥ್ಯ , ದಕ್ಷತೆಯುಳ್ಳ ವ್ಯಕ್ತಿ . ಉಡುಪಿ ಕೃಷ್ಣದೇವರಿಗೆ ಅನೇಕ ವರ್ಷಗಳಿಂದ ನಿತ್ಯನೈವೇದ್ಯವನ್ನು ತಯಾರಿಸುವವರಲ್ಲಿ ಒಬ್ಬರಾಗಿದ್ರು . ಮಧ್ಯಾಹ್ನದ ಮಹಾಪೂಜೆಯವರೆಗೂ ಒಂದು ಹನಿ ನೀರೂ ಸೇವಿಸದೇ ನೈವೇದ್ಯ ತಯಾರಿಸುವ ಅತ್ಯಂತ ಪರಮ ಶ್ರೇಷ್ಠ ಕರ್ತವ್ಯವವನ್ನು ನಿರ್ವಹಿಸುತ್ತಿದ್ದ ಅವರ ಶ್ರದ್ಧೆ ನಿಷ್ಠೆ ಅದ್ಭುತ.

ಶನಿವಾರದ೦ದು ನಿಧನರಾದ ಶ್ರೀನಿವಾಸ ಭಟ್ ರವರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಶ್ರಮವನ್ನು ಹಾಕಿದ್ದರು. ಅದರೆ ಇ೦ದು ಗಣೇಶ್ ಭಟ್ ರವರೇ ದೈವಧೀನರಾಗಿದ್ದಾರೆ. ವಿವಿಧ ಮಠದ ಸ್ವಾಮಿಯವರು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment