Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಪ್ರವಾಹದಿಂದ ಹೋಟೆಲ್ ಮಹಡಿ ಹತ್ತಿ ಕುಳಿತ 11 ಜನರನ್ನು ನೇವಿ ಹೆಲಿಕಾಪ್ಟರ್ ಮೂಲಕ ರಕ್ಷಣೆ

ಕಾರವಾರ, ಜು.24: ತೀವ್ರ ಮಳೆಯಿಂದಾಗಿ ನೆರೆ ಸಂಭವಿಸಿದ ಪರಿಣಾಮ 11 ಮಂದಿ ಹೋಟೇಲಿನ ಮಹಡಿ ಹತ್ತಿ ಕುಳಿತುಕೊಂಡಿದ್ದು, ಬಳಿಕ ಎನ್‌ಡಿಆರ್‌ಎಫ್ ತಂಡದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಐಎನ್‌ಎಸ್ ಕದಂಬ ನೌಕಾನೆಲೆಯ ಹೆಲಿಕಾಪ್ಟರ್ ಸಿಬ್ಬಂದಿ ಸುಂಕಸಾಳದ ಹೈಲ್ಯಾಂಡ್ ಹಾಗೂ ನವಮಿ ಹೋಟೆಲ್‌‌ನಲ್ಲಿ ಸಿಲುಕಿಕೊಂಡಿದ್ದವರನ್ನು ಏರ್ ಲಿಫ್ಟ್ ಮಾಡಿ ರಕ್ಷಿಸಿದ್ದಾರೆ.

ಮತ್ತೊಂದೆಡೆ ಉಕ್ಕಿ ಹರಿಯುತ್ತಿರುವ ಗಂಗಾವಳಿ ನದಿ ಪ್ರವಾಹಕ್ಕೆ ಗುಳ್ಳಾಪುರದ ಸೇತುವೆಯೇ ಕೊಚ್ಚಿ ಹೋಗಿದ್ದರಿಂದ ಗುಳ್ಳಾಪುರ- ಹಳವಳ್ಳಿ ಸಂಪರ್ಕ ಕಡಿತವಾಗಿದೆ.

ಇನ್ನು ಈ ಭಾಗದಲ್ಲಿ 2800 ಕುಟುಂಬಗಳಿವೆ ಕೊಡಸಳ್ಳಿ ನಿರಾಶ್ರಿತರು ಹೆಗ್ಗಾರ, ಕಲ್ಲೇಶ್ವರದಲ್ಲಿ ನೆಲೆ ನಿಂತಿದ್ದರು. ಶೇವ್ಕಾರ್, ಕೈಗಡಿ, ದೊರಣಗಾರ್, ಕೋನಾಳ, ಕನಕನಹಳ್ಳಿ, ಮಳಲಗಾಂವ, ಹಳವಳ್ಳಿ‌, ಕಮ್ಮಾಣಿ‌‌ ಗ್ರಾಮಗಳಿಗೆ ಈ ಸೇತುವೆ ಸಂಪರ್ಕ ಕೊಂಡಿಯಾಗಿದ್ದು, ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು, ನಾಗರಿಕರು, ಕೃಷಿಕರು ಯಲ್ಲಾಪುರದಿಂದ ಅಂಕೋಲಾಕ್ಕೆ ತೆರಳಲು ಸೇತುವೆಯನ್ನು ಬಳಸುತ್ತಿದ್ದರು‌ ಎನ್ನಲಾಗಿದೆ.

No Comments

Leave A Comment