Log In
BREAKING NEWS >
ಡಿಸೆ೦ಬರ್ 08 ರಿ೦ದ ಡಿಸೆ೦ಬರ್ 15ರವರೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 93ನೇ ಭಜನಾ ಸಪ್ತಾಹಮಹೋತ್ಸವವು ಜರಗಲಿದೆ- ಪ್ರತಿ ನಿತ್ಯವೂ ಪೇಟೆ ಉತ್ಸವ,ತೊಟ್ಟಿಲ ಸೇವೆ,ಕಾಕಡಾರತಿ ಕಾರ್ಯಕ್ರಮವು ಜರಗಲಿದೆ....

ಉಡುಪಿ ಪೆರ್ಣಂಕಿಲ ಗ್ರಾಮಸ್ಥರ ಆತಂಕಕ್ಕೆ ಕಾರಣವಾದ ಚಿರತೆ ಸೆರೆ

ಉಡುಪಿ: ಜು 23;ಉಡುಪಿಯ ಪೆರ್ಣಂಕಿಲ ಗ್ರಾಮಸ್ಥರಲ್ಲಿ ಕಳೆದ ಒಂದು ತಿಂಗಳಿಂದ ಆತಂಕ ಹುಟ್ಟಿಸಿ ಭಯಕ್ಕೆ ಕಾರಣವಾದ ಚಿರತೆ ಸೆರೆಯಾಗಿದೆ.

ಪೆರ್ಣಂಕಿಲ ಭಾಗದಲ್ಲಿ ಚಿರತೆಗಳ ಓಡಾಟದ ಬಗ್ಗೆ ಈ ಹಿಂದೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗುಂಡುಪಾದೆಯ ಆಶೋಕ್ ನಾಯಕ್ ಎಂಬವರ ತೋಟದಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ಅರಣ್ಯ ಇಲಾಖೆಯಿಂದ ಚಿರತೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದ್ದು ಬೋನಿಗೆ ಬಿದ್ದಿದೆ.

ಇನ್ನು ಇದು ಪೆರ್ಣಂಕಿಲ ಗ್ರಾಮದಲ್ಲಿ ಹಿಡಿದ ಮೂರನೇ ಚಿರತೆಯಾಗಿದ್ದು, ಕಳೆದ 11 ವರ್ಷಗಳಿಂದ ಈ ಹಿರಿಯಡ್ಕ ಭಾಗದಲ್ಲಿ ಚಿರತೆ ಹಾವಳಿ ಜೋರಾಗಿದ್ದು ಅನೇಕ ಬಾರಿ ಗ್ರಾಮಸ್ಥರು ಅದನ್ನು ಹಿಡಿಯುವಂತೆ ಅರಣ್ಯ ಇಲಾಖೆಯ ಮೊರೆ ಹೋಗಿದ್ದರು. ಈ ಗ್ರಾಮದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಅನೇಕ ಬಾರಿ ಚಿರತೆ ಕಾಣ ಸಿಕ್ಕಿತ್ತು.

ಕೊನೆಗೂ ಅರಣ್ಯ ಇಲಾಖೆಯವರ ಬೋನಿಗೆ ಚಿರತೆ ಸಿಕ್ಕಿ ಬಿದ್ದಿದ್ದು ಗ್ರಾಮಸ್ಥರು ನಿರಾಳ ವ್ಯಕ್ತಪಡಿಸಿದ್ದಾರೆ.

No Comments

Leave A Comment