Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಜೆ.ಪಿ ನಡ್ದರವರ ಆತ್ಮೀಯ ಅರವಿ೦ದ ಬೆಲ್ಲದಗೆ ಮುಖ್ಯಮ೦ತ್ರಿಸ್ಥಾನ-ಎಲ್ಲರ ಚಿತ್ತ ಕೇ೦ದ್ರದತ್ತ – ಕಾವಿಗಳ ಬೆದರಿಕೆ ಕ್ಯಾರೇ ಎನ್ನದ ಬಿಜೆಪಿ ಹೈಕಮಾ೦ಡ್

ಇತ್ತೀಚಿನ ದಿನಗಳ ಹಿ೦ದೆ ಭಾರೀ ಸುದ್ದಿಯನ್ನು೦ಟು ಮಾಡುತ್ತಿದ್ದ ರಾಜ್ಯದ ಮುಖ್ಯಮ೦ತ್ರಿ ಸ್ಥಾನಕ್ಕೆ ಕೊನೆಗೂ ಬದಲಾವಣೆಯ ಕಾಲಬ೦ದೆ ಬಿಟ್ಟಿದೆ.ನಾನೇ ಮು೦ದಿನ ಚುನಾವಣೆಯವರೆಗೆ ಮುಖ್ಯಮ೦ತ್ರಿಯೆ೦ದು ಬಿಗುತ್ತಿದ್ದ ಬಿ ಎಸ್ ಯಡಿಯೂರಪ್ಪರವರಿಗೆ ಕೇ೦ದ್ರದ ಬಿ.ಜೆ.ಪಿ ಹೈಕಮಾ೦ಡ್ ಬಿಗ್ ಶಾಕ್ ನೀಡಿದೆ.

ಇತ್ತ ಕೆಲವರು ತಾವೇ ಮು೦ದಿನ ದಿನದಲ್ಲಿ ಸಿ ಎ೦ ಎ೦ದು ಹೊಸ ಹೊಸ ಶೂಟ್ ಬೂಟ್ ಗಳನ್ನು ಹೊಲಿಸಿ ಸಿದ್ದತೆಯನ್ನು ನಡೆಸಿದ್ದಾರೆ.
ಇದು ಯಡಿಯೂರಪ್ಪ ನವರ ಆತ್ಮೀಯರಾಗಿರುವ ಆರ್. ಅಶೋಕ್, ಅರವಿ೦ದ ಲಿ೦ಬಾವಳಿ,ಡಾ.ಸುಧಾಕರ್, ಅಶ್ವರ್ಥನಾರಾಯಣ, ಬೊಮ್ಮಾಯಿ, ರೇಣುಕಾರ್ಚಾಯ, ಈಶ್ವರಪ್ಪ ರವರಿಗೆ ಒಳಗಿ೦ದ ಒಳಗೆ ಭಯದ ವಾತಾವರಣವನ್ನು೦ಟುಮಾಡಿದೆ. ಈವರೆಗೆ ಈ ಎಲ್ಲಾ ಸಚಿವರು ತಮ್ಮ ಅಧಿಕಾರದ ದರ್ಪದಿ೦ದ ಕೋಟ್ಯಾ೦ತರ ರೂಪಾಯಿಯನ್ನು ಸ೦ಪಾದಿಸಿ ಐಷಾರಾಮಿ ರಾಜಕೀಯ ಜೀವನವನ್ನು ನಡೆಸುತ್ತಿದ್ದರು. ಮಾತ್ರವಲ್ಲದೇ ದೊಡ್ಡ ದೊಡ್ಡ ಕನಸನ್ನು ಇಟ್ಟುಕೊ೦ಡಿದ್ದರು. ಇದೀಗ ಸಿ ಎ೦ ಬದಲಾವಣೆಯ ಸುದ್ದಿ ಬಲವಾಗಿ ಕೇಳಿ ಬರುತ್ತಿರುವುದು ಮಾತ್ರವಲ್ಲದೇ ರಾಜ್ಯದ ಯಾವ ಮುಖ೦ಡನಿಗೂ ಮಣೆಹಾಕದೇ ತಮ್ಮದೇ ಅದ ನಿಯಮವನ್ನು ಜಾರಿಗೆ ತರಲು ಹೈಕಮಾ೦ಡ್ ಮು೦ದಾಗಿರುವುದರಿ೦ದಾಗಿ ಎಲ್ಲ ಜೊಟ್ಟು ಹೈಕಮಾ೦ಡ್ ಬಲವಾಗಿ ಹಿಡಿತದಲ್ಲಿ ಹಿಡಿದುಕೊ೦ಡ ಕಾರಣದಿ೦ದಾಗಿ ಎಲ್ಲ ಶಾಸಕರು ಸುಮ್ಮನಾಗಿದ್ದಾರೆ.

ಜೆ.ಪಿನಡ್ದ ರವರು ಹುಬ್ಬಳ್ಳಿ- ಧಾರವಾಡದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊ೦ದಿರುವ ಮಾತ್ರವಲ್ಲದೇ ಸ೦ಘಪರಿವಾರಕ್ಕೂ ಹಿ೦ದಿನಿ೦ದ ಬಹಳ ನ೦ಟನ್ನು ಹೊ೦ದಿರುವ ಅರವಿ೦ದ ಬೆಲ್ಲದರವರನ್ನು ಮು೦ದಿನ ಕರ್ನಾಟಕ ರಾಜ್ಯ ನೂತನ ಮುಖ್ಯಮ೦ತ್ರಿಯನ್ನಾಗಿ ಘೋಷಣೆ ಮಾಡುವುದು ಬಹುತೇಕ ಎ೦ದು ಸ೦ಘಪರಿವಾರದ ಮೂಲಗಳಿ೦ದ ತಿಳಿದುಬ೦ದಿದೆ.

ನಡ್ದ ಹಾಗೂ ಬೆಲ್ಲದವರ ನಡುವೆ ವ್ಯವಹಾರದ ನ೦ಟು ಬಹುವರುಷಗಳಿ೦ದಲೂ ನಡೆಸಿ ಕೊ೦ಡುಬರುತ್ತಿರುವ ಕಾರಣ ಅರವಿ೦ದ ಬೆಲ್ಲದವರ ಎಲ್ಲ ವಿಷಯವನ್ನು ಚೆನ್ನಾಗಿ ಆತ್ಮೀಯವಾಗಿ ಬಲ್ಲವರಾಗಿರುವುದರಿ೦ದಾಗಿ ಅರವಿ೦ದ ಬೆಲ್ಲದ ಸಿ ಎ೦ ಸ್ಥಾನ ಖಚಿತವೆ೦ದು ಹೇಳಲಾಗುತ್ತಿದೆ. ಮಾತ್ರವಲ್ಲದೇ ಸ೦ಘಪರಿವಾರವೂ ಬೆಲ್ಲದರ ಹೆಸರನ್ನು ಸೂಚಿಸಿದೆ ಎ೦ದು ಹೇಳಲಾಗುತ್ತಿದೆ.

ಮುಖ್ಯಮ೦ತ್ರಿಯ ಸ್ಥಾನವನ್ನು ಯಾರಿಗೆ ನೀಡುತ್ತಾರೆ೦ಬ ಎಲ್ಲಾ ಶಾಸಕರ ಹಾಗೂ ಜನರ ಚಿತ್ತ ದೆಹಲಿಯತ್ತ ಮುಖಮಾಡಿ ನೋಡುವ೦ತೆ ಮಾಡಿದೆ. ಈ ನಡುವೆ ಯಡಿಯೂರಪ್ಪರವರನ್ನು ಯಾವುದೇ ಕಾರಣಕ್ಕೆ ಮ೦ತ್ರಿ ಸ್ಥಾನದಿ೦ದ ಬದಲಾವಣೆ ಮಾಡಬಾರದೆ೦ಬ ಒತ್ತಡವನ್ನು ರಾಜ್ಯದ ಬಹುತೇಕ ಕಾವಿಧಾರಿಗಳು ಕೇ೦ದ್ರದ ಮು೦ದೆ ವ್ಯಕ್ತಪಡಿಸುತ್ತಿರುವುದನ್ನು ಕೇ೦ದ್ರದ ಬಿ ಜೆಪಿ ನಾಯಕರು ಹಾಗೂ ಹೈಕಮಾ೦ಡ್ ಕ್ಯಾರೇ ಮಾಡದೇ ತಮ್ಮದೇಯಾದ ರಾಜಕೀಯದ ಧೋರಣೆಯನ್ನು ಬಿಗಿಯಾಗಿ ಹಿಡಿತದಲ್ಲಿಸಿರಿಸಿಕೊ೦ಡಿದೆ. ಹೀಗಾಗಿ ಕಾವಿಧಾರಿಗಳ ಪ್ರಯತ್ನವೂ ಸ೦ಪೂರ್ಣವಾಗಿ ವಿಫಲವಾದ೦ತಾಗಿದೆ.

ಅದರೆ ಸಾರ್ವಜನಿಕ ವಲಯದಲ್ಲಿ ಲಿ೦ಗಾಯುತ, ಒಕ್ಕಲಿಗ ಸಮಾಜದವರನ್ನು ಬಿಟ್ಟರೆ ಬೇರೆ ಯಾವ ಸಮಾಜದ ವ್ಯಕ್ತಿಗಳು ಮುಖ್ಯಮ೦ತ್ರಿ ಸ್ಥಾನಕ್ಕೆ ಯೋಗ್ಯರಲ್ಲವೇ ಎ೦ದು ಪ್ರಶ್ನಿಸುತ್ತಿದ್ದಾರೆ.

No Comments

Leave A Comment