Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಯಮಹ ಇಂಡಿಯಾ ಕಂಪೆನಿಯ ನೂತನ “ರೆಟ್ರೊ ಮಾದರಿಯ FZ-X” ಬೈಕ ಮಾರುಕಟ್ಟೆಗೆ ಬಿಡುಗಡೆ…

ಉಡುಪಿ: ಯಮಹ ಇಂಡಿಯಾ ಕಂಪೆನಿಯು ತನ್ನ ಎಫ್‌ಝಡ್ ಬೈಕುಗಳ ಸರಣಿಯಲ್ಲಿ ನೂತನವಾಗಿ ಹೊರ ತಂದಿರುವ ವಿನೂತನ “ರೆಟ್ರೊ ಮಾದರಿಯ FZ-X” ಬೈಕನ್ನು ಉಡುಪಿಯ ಕಲ್ಸಂಕ-ಗುಂಡಿಬೈಲು ರಸ್ತೆಯ ಉಡುಪಿ ಮೋಟರ್ಸ್‌ನಲ್ಲಿ ಬ್ಯಾಂಕ್ ಆಫ್ ಬರೋಡ ಉಡುಪಿ ಶಾಖೆಯ ಮ್ಯಾನೇಜರ್ ಚರಣ್‌ರಾಜ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಶಬರೀಶ್ ಅವರು FZ-x ಬೈಕನ್ನು ಇತ್ತೀಚಿಗೆ ಅನಾವರಣಗೊಳಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಉಡುಪಿ ಮೋಟರ್ಸ್‌ ಸ೦ಸ್ಥೆಯ ಪಾಲುದಾರರಾದ ಟೈಟಸ್ ಸಾರಸ್, ಟೆರೆನ್ಸ್ ಸಾರಸ್ ಹಾಗೂ ಜಯಪ್ರಕಾಶ್ ಅವರು ಉಪಸ್ಥಿತರಿದ್ದರು‌.

ಪ್ರಥಮ ಗ್ರಾಹಕರಾದ ಡ್ಯೂಯೆನ್ ಹೆನ್ರಿ ಅವರಿಗೆ ಬೈಕನ್ನು ಹಸ್ತಾಂತರಿಸಲಾಯಿತು.

ಭಾರತದ ಯುವ ಜನರ ಕನಸು ಹಾಗೂ ಬೇಡಿಕೆಗಳಿಗೆ ಅನುಗುಣವಾಗಿ ಯಮಹ ಇಂಡಿಯಾ ಕಂಪೆನಿಯು ಮೊತ್ತ ಮೊದಲ ಬಾರಿಗೆ ಬ್ಲೂಟೂತ್, ಜಿಪಿಎಸ್ ಆಧಾರಿತ ನೇವಿಗೇಶನ್-ಸುರಕ್ಷೆ ಹಾಗೂ ವಾಹನ ಬಳಕೆಯ ವಿವರ ಒದಗಿಸುವ ಸಾಧನಗಳನ್ನು ಹೊಂದಿರುವ ಯಮಹ FZ-x ಬೈಕುಗಳನ್ನು ಬಿಡುಗಡೆಗೊಳಿಸಿದೆ.

ಗ್ರಾಹಕರಿಗೆ ಬ್ಲೂಟೂತ್ ರಹಿತವಾಗಿಯೂ ಆಯ್ಕೆಯ ಅವಕಾಶವಿದೆ.ಹಗಲು ಮತ್ತು ರಾತ್ರಿ ಬಳಸಬಹುದಾದ ಎಲ್ಇಡಿ ಹೆಡ್‌ಲೈಟ್ ಜೊತೆಗೆ ಡೇ ಟೈಮ್ ರನ್ನಿಂಗ್ ಲೈಟ್ ಹೊಂದಿದ್ದು, ಸುರಕ್ಷಾ ದೃಷ್ಟಿಯಿಂದ ಸೈಡ್ ಸ್ಟಾಂಡ್ ಇಂಜಿನ್ ಕಟ್- ಆಫ್ ಸ್ವಿಚ್ ಅಳವಡಿಸಲಾಗಿದೆ. ಆರಾಮದಾಯಕ ದೂರ ಪ್ರಯಾಣಕ್ಕಾಗಿ ಎರಡು ಹಂತದ ಸೀಟುಗಳ ವಿನ್ಯಾಸವಿದೆ. ಸಣ್ಣ ಕುಟುಂಬದ ಸವಾರಿಗೆ ಹಾಗೂ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಬೈಕಿನ ವಿನ್ಯಾಸವಿದೆ.

ಮೂರು ಆಕರ್ಷಕ ಬಣ್ಣಗಳಲ್ಲಿ ಬೈಕುಗಳು ಲಭ್ಯವಿವೆ. ಬುಕ್ಕಿಂಗ್ ಆರಂಭಗೊಂಡಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಇನ್ನು ನೀವು ಸಹ ತಡಮಾಡದೇ ಇ೦ದೇ FZ-X ಬೈಕ್ ಖರೀದಿಸಿರಿ.

No Comments

Leave A Comment