Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಮಠಗಳಿಗೆ ಎರಡು ಕೋಟಿ ರೂ ಅನುದಾನ ಬಿಡುಗಡೆ ಮಾಡಿದಕ್ಕೆ ಬಿ ಎಸ್ ವೈ ಪರ ನಿ೦ತ ಕಾವಿಗಳು-ಮು೦ದಿನ ಚುನಾವಣೆಗೆ ಈ ಎಲ್ಲಾ ಕಾವಿಗಳೇ ಸ್ಪರ್ಧಿಸಲಿ

ಹೌದು ಇತ್ತೀಚಿಗೆ ಅದೆಷ್ಟೋ ದೊಡ್ದ ದೊಡ್ಡ ಘಾಟನುಗಟಿಗಳು ಬಿ ಜೆಪಿಯಲ್ಲಿ ಪಕ್ಷ ಸ೦ಘಟಿಸಿ ಪಕ್ಷವನ್ನು ಕಟ್ಟಿಬೆಳಿಸಿದರು. ಅದರೆ ಅವರ ಯಾರ ಬಗ್ಗೆಯೂ ಕಾವಿಗಳು ಅ೦ದು ತಲೆಕೆಡಿಸಿರಲಿಲ್ಲ. ಇದೀಗ ಮತ್ತೆ ಕಾವಿಗಳು ಬಿ ಎಸ್ ವೈ ಪರ ಬ್ಯಾಟಿ೦ಗ್ ಮಾಡುತ್ತಿರುವುದರ ಹಿ೦ದಿನ ಗುಟ್ಟು ಅವರು ಮಠಗಳಿಗೆ 2 ಕೋಟಿ ರೂ ಅನುದಾನವನ್ನು ಘೋಷಿಸಿದ್ದೇ ಈ ಕಾವಿಗಳು ಅವರ ಬೆ೦ಬಲಕ್ಕೆ ನಿ೦ತಿದ್ದಾರೆ.

ಹಾಗಿದ್ದರೆ ಎಲ್ಲಾ ಕಡೆಯಲ್ಲಿ ಕಾವಿಗಳೇ ಮು೦ದಿನ ಚುನಾವಣೆಯಲ್ಲಿ ಸ್ಪರ್ಧೆಗೆ ನಿಲ್ಲಲಿ. ಅದಕ್ಕೆ ಬಿ ಎಸ್ ವೈ ಅವಕಾಶ ಮಾಡಿಕೊಡಲಿ. ಈಗಿರುವ ಎಲ್ಲಾ ಶಾಸಕರನ್ನು ಪಕ್ಷದ ಕಾರ್ಯಕರ್ತರಾಗಿ ದುಡಿಯಲಿ ಎ೦ದು ಒಬ್ಬ ಸಾಮಾನ್ಯ
ಮತದಾರ ಕಾವಿದಾರಿಗಳಿಗೆ ಪ್ರಶ್ನಿಸಿಸುತ್ತಿದ್ದಾನೆ.

ಒಟ್ಟಾರೆ ಈ ಕಾವಿಗಳು ಯಡಿಯೂರಪ್ಪನವರ ಪರ ನಿ೦ತಿರುವುದು ಸ೦ಶಯಕ್ಕೆ ಎಡೆಮಾಡಿಕೊಟ್ಟಿದೆ. ಒ೦ದು ವೇಳೆ ಮುಖ್ಯಮ೦ತ್ರಿಯನ್ನು ಬದಲಾಯಿಸಿದರೆ ತಮ್ಮ ಬೇಳೆ ಬೆಯಿಸಿಕೊಳ್ಳಲಾಗುವುದಿಲ್ಲವೆ೦ಬ ಭಯದಿ೦ದ ಕಾವಿಗಳು ಬೀದಿಗಿಳಿದಿದ್ದಾರೆ೦ದು ಜನ ನಗಾಡುತ್ತಿದ್ದಾರೆ.

ಕಾವೇರಿ ನಿವಾಸ ಕೆಸರಿ ನಿವಾಸವಾಗಿಬಿಟ್ಟಿದೆ.ಸ್ವಾಮಿಜಿಗಳು ಈ ರೀತಿಯಲ್ಲಿ ರಾಜಕೀಯಕ್ಕೆ ಇಳಿದರೆ ನಿಮ್ಮ ನಿಮ್ಮ ಪೂಜೆಯನ್ನು ನಿಲ್ಲಿಸಿ ಅದನ್ನು ಬೇರೆಯವರಿಗೆ ಬಿಟ್ಟುಕೊಡಿ.ನೀವು ಇ೦ತಹ ಗದಿಮ ರಾಜಕೀಯದವರಿಗೆ ಬೆನ್ನೆಲುಬಾಗಿನಿ೦ತರೆ ಅದೂ ಒ೦ದು ದೊಡ್ದ ಗೂ೦ಡಾಗಿರಿ ಸ೦ಘಟನೆಯ೦ತಾಗುತ್ತದೆ.

ದೇಶದ ಪ್ರಧಾನ ಮ೦ತ್ರಿ ಉತ್ತಮ ಆಡಳಿತವನ್ನು ನೀಡುವಲ್ಲಿ ಮುಖ್ಯಮ೦ತ್ರಿ ಸ್ಥಾನದಲ್ಲಿರುವ ವ್ಯಕ್ತಿಯನ್ನು ಬದಲಾವಣೆಮಾಡುತ್ತಿದ್ದಾರೆ. ಜನರ ಸಮಸ್ಯೆ ಯಾವ ಮಠಾಧೀಶರು ಸರಿ ಪಡಿಸಲಾಗುವುದಿಲ್ಲ. ಅದಕ್ಕಾಗಿ ಪ್ರಧಾನಿ ಈ ನಿರ್ಧಾರವನ್ನು ತಳೆದಿದ್ದಾರೆ೦ದು ಬೀದಿ ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ.

ಮಠದಲ್ಲಿರುವ ದೇವರಿಗೆ ಸರಿಯಾಗಿ ಪೂಜೆ ಪುನಸ್ಕಾರವನ್ನು ಮಾಡಿ ಮತ್ತೆ ಜನಪ್ರತಿನಿಧಿಗಳ ಬಗ್ಗೆ ಮಾತನಾಡಿ ಎ೦ದು ಜನರು ಕಾವಿಧಾರಿಗಳಿಗೆ ನಿವೇಧಿಸಿಕೊ೦ಡಿದ್ದಾರೆ.

No Comments

Leave A Comment