Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಭಕ್ತರ ಶ್ರೇಯ:ಪ್ರಾರ್ಥನೆಯಿಂದ ಆಯುರ್ವೃದ್ಧಿ” ಪುತ್ತಿಗೆ ಶ್ರೀಗಳು

ಉಡುಪಿ:ಬಾಲ್ಯದಲ್ಲಿ ನನ್ನ ಜಾತಕವನ್ನು ನೋಡಿದ ಜ್ಯೋತಿಷಿಗಳು ಅನೇಕ ದಾರ್ಶನಿಕರಂತೆ ನನಗೆ ಕೇವಲ ಮೂವತ್ತು ಮೂರು ವರ್ಷ ಆಯುಸ್ಸು ಎಂದಿದ್ದರು. ಇದರಿಂದ ತುಂಬಾ ಒತ್ತಡದಲ್ಲಿ ಅಲ್ಪ ಸಮಯದಲ್ಲಿ ಹೆಚ್ಚು ಕಾರ್ಯಗಳನ್ನು ಮಾಡುವಂತಾಯಿತು. ಆದರೆ ಇದರಿಂದ ಸಂತುಷ್ಟರಾದ ನಮ್ಮ ಭಕ್ತರು ದೇವರಲ್ಲಿ ವಿಶೇಷ ಶ್ರೇಯ:ಪ್ರಾರ್ಥನೆಯನ್ನು ಮಾಡಿದರು. ಇವರೆಲ್ಲರ ಪ್ರಾರ್ಥನೆಯ ಫಲವಾಗಿ ಈಗ ಅರವತ್ತು ಸಂವತ್ಸರಗಳ ಸಾಧನೆಗಳನ್ನು ಸಮರ್ಪಿಸಲು ಸಾಧ್ಯವಾಯಿತು. ಆದ್ದರಿಂದ ಭಕ್ತರ ಪ್ರಾರ್ಥನೆಯಿಂದ ಆಯುಸ್ಸು ವೃದ್ಧಿಸುವುದು. ನಮ್ಮ ಗುರುಗಳಾದ ಶ್ರೀಸುಜ್ನಾನೇಂದ್ರತೀರ್ಥರು ಮತ್ತು ಶ್ರೀವಿದ್ಯಾಮಾನ್ಯತೀರ್ಥರ ಪರಮಾನುಗ್ರಹದಿಂದ ಅನೇಕ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯವಾಯಿತು ಎಂದು ಎಂದು ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಕರೆ ನೀಡಿದರು.

ಪುತ್ತಿಗೆಯ ಮೂಲಮಠದಲ್ಲಿ ಪೂಜ್ಯ ಶ್ರೀಪಾದರ ಷಷ್ಠಬ್ಧಿ ಪೂರ್ತಿ ಶಾಂತಿಯ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆದವು. ವೇದಮಂತ್ರಗಳ ಪಠಣೆಯೊಂದಿಗೆ ನೂರು ಕಲಶಗಳಿಂದ ಶ್ರೀಗಳಿಗೆ ಅಭಿಷೇಕವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಭಕ್ತರು ಸಮರ್ಪಿಸಿದ ಸನ್ಮಾನವನ್ನು ಸ್ವೀಕರಿಸಿ ಅನುಗ್ರಹ ಸಂದೇಶವನ್ನು ನೀಡಿದರು.

ಪರಮಪೂಜ್ಯ ಶ್ರೀಪಾದರ ಷಷ್ಠಿ ಪೂರ್ತಿ ಸಂಭ್ರಮದ ಪ್ರಯುಕ್ತ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ತಿರುಮಲ ಶ್ರೀನಿವಾಸ ದೇವಸ್ಥಾನ ಪ್ರಸಾದ, ತಮಿಳುನಾಡಿನ ಶ್ರೀರಂಗಂ ದೇವಸ್ಥಾನ ಪ್ರಸಾದ, ಧರ್ಮಸ್ಥಳದಿಂದ ಮಂಜುನಾಥ ದೇವರ ಪ್ರಸಾದ , ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಸಾದ, ನೀಲಾವರ ಮಹಿಷಮರ್ದಿನಿ ದೇವಿಯ ಪ್ರಸಾದ, ಕುಂಜಾರು ಗಿರಿ ಮತ್ತು ಪಾಜಕ ಸನ್ನಿಧಾನದಿಂದ ಪ್ರಸಾದ, ಮಳಖೇಡದಿಂದ ಶ್ರೀ ಜಯತೀರ್ಥರ ಶೇಷವಸ್ತ್ರ, ನವವೃಂದಾವನ ಕ್ಷೇತ್ರದಿಂದ ಶ್ರೀ ವ್ಯಾಸರಾಜರ ಶೇಷವಸ್ತ್ರ ಗಳ ಸಮರ್ಪಣೆಯನ್ನು ಮಾಡಲಾಯಿತು. ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ವಾನ್ ಹರಿದಾಸ ಭಟ್ ಬೆಂಗಳೂರು, ವಿದ್ವಾನ್ ಹರಿದಾಸ ಉಪಾಧ್ಯಾಯ ಉಡುಪಿ, ವಿದ್ವಾನ್ ಕೇಂಜ ಶ್ರೀಧರ ತಂತ್ರಿ, ಶ್ರೀ ಸಗ್ರಿ ರಾಘವೇಂದ್ರ ಉಪಾಧ್ಯಾಯ, ವಿದ್ವಾನ್ ರಘೂತ್ತಮಾಚಾರ್ ಶ್ರೀರಂಗಂ, ಡಾ.ಎನ್. ವೆಂಕಟೇಶಾಚಾರ್ ಬೆಂಗಳೂರು, ವಿದ್ವಾನ್ ಪ್ರಕಾಶಾಚಾರ್ ಉಡುಪಿ, ವಿದ್ವಾನ್ ಡಿ.ಪಿ.ಮಧುಸೂದನಾಚಾರ್ ಮೈಸೂರು, ವಿದ್ವಾನ್ ಆನಂದತೀರ್ಥ ಮಠದ ಉಡುಪಿ, ಶ್ರೀ ಎಂ.ಬಿ.ಪುರಾಣಿಕ್ ಮಂಗಳೂರು, ಶ್ರೀ ಪ್ರದೀಪಕುಮಾರ ಕಲ್ಕೂರ, ಶ್ರೀ ಹರಿಕೃಷ್ಣ ಪುನರೂರು, ಮೂಡುಬಿದಿರೆ ಶ್ರೀಪತಿ ಭಟ್, ಮೊದಲಾದ
ಅನೇಕ ವಿದ್ವಾಂಸರು ಹಾಗೂ ಶ್ರೀಮಠದ ಭಕ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀಪಾದರು ಬರೆದ “ಆಚಾರ್ಯ ಮಧ್ವರ ಜಂವನ-ಸಂದೇಶ” ಮತ್ತು “ಅಪರೂಪದ ಹೃದಯಜೀವಿ”, ಹಾಗೂ ಶ್ರೀಗಳ ಲೇಖನಗಳು ಸಂಗ್ರಹದ “ಶ್ರೀ ಸುಗುಣೇಂದ್ರ ವಾಣಿ” ಎಂಬ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಶ್ರೀ ಪುತ್ತಿಗೆ ವಿದ್ಯಾಪೀಠದ ಹಳೇ ವಿದ್ಯಾರ್ಥಿಗಳು ಪುಷ್ಪವೃಷ್ಟಿಯೊಂದಿಗೆ ಅತ್ಯಂತ ವೈಭವದಿಂದ ಗುರುವಂದನೆಯನ್ನು ಸಮರ್ಪಿಸಿದರು. ವಿದ್ವಾನ್ ನಾರಾಯಣ ಸಾರಳಾಯರು ಪ್ರಾರ್ಥನೆ ಸಲ್ಲಿಸಿದರು. ವಿದ್ವಾನ್ ಬಿ. ಗೋಪಾಲಾಚಾರ್ಯರು ಕಾರ್ಯಕ್ರಮವನ್ನು ನಿರೂಪಿಸಿದರು.

No Comments

Leave A Comment