Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ವೃ೦ದಾವನಸ್ಥರಾದ ಗೋಕರ್ಣ ಮಠದ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ್ ವಡೇರ್

ಉಡುಪಿ: ಜಿ ಎಸ್ ಬಿ ಸಮಾಜದ ಪೂಜ್ಯ ಗುರುವರ್ಯಾರಾದ ಗೋಕರ್ಣ ಮಠದ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ್ ವಡೇರ್ ಸ್ವಾಮೀಜಿ ಯವರು ಸೋಮವಾರದ೦ದು ಮಧ್ಯಾಹ್ನ 1.10 ಕ್ಕೆ ಹೃದಯಾಪಘಾತದಿ೦ದ ಶ್ರೀ ಪಾರ್ತಗಾಳಿಮಠ ಗೋವಾದಲ್ಲಿ ತಮ್ಮ ಪ್ರಾಣವನ್ನು ತ್ಯಜಿಸಿ ಸಮಾಜ ಬಾ೦ಧವರನ್ನು ಅಗಲಿದ್ದರು.

ಇವರ ವೃ೦ದನವನ್ನು ಪಾರ್ತಾಗಾಳಿ ಮಠದ ಒಳಭಾಗದಲ್ಲಿಯೇ ಇವರ ಕಿರಿಯ ಯತಿಗಳಾದ (ಶಿಷ್ಯ) ಶ್ರೀ ಮತ್ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮಿಯವರು ಸಕಲ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ್ ವಡೇರ್ ರವರ ಪಾರ್ಥಿವ ಶರೀರವನ್ನು ವೃ೦ದನಗೈದರು.

ಸ್ವಾಮಿಜಿಯವರು ಹರಿಪಾದವನ್ನು ಸೇರಿದ ಸುದ್ದಿಯಿ೦ದಾಗಿ ವಿವಿಧ ಕಡೆಗಳಲ್ಲಿ ಸ್ವಾಮಿಯವರ ಭಾವಚಿತ್ರವನ್ನಿಟ್ಟು ಮೌನಚಾರಣೆಯನ್ನು ಸಮಾಜ ಬಾ೦ಧವರು ನಡೆಸಿದರು. ಸ್ವಾಮಿಯವರ ಸ್ವ೦ತ ಊರಾದ ಉಡುಪಿ ಜಿಲ್ಲೆಯ ಗ೦ಗೊಳ್ಳಿ ಪೇಟೆಯವರು ಸ೦ಪೂರ್ಣವಾಗಿ ವ್ಯಾಪರ-ವಹಿವಾಟುಗಳನ್ನು ಬ೦ದ್ ಮಾಡಿದರು.

No Comments

Leave A Comment