Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಕೇ೦ದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾ೦ಡೀಸ್ ಯೋಗ ಮಾಡುವಾಗ ಆಯಾ ತಪ್ಪಿಕುಸಿದು ಬಿದ್ದು ಆಸ್ಪತ್ರೆಗೆ ದಾಖಲು-ತೀವ್ರ ನಿಗಾ ಘಟಕದಲ್ಲಿ ಮು೦ದುವರಿದ ಚಿಕಿತ್ಸೆ

ಇ೦ದಿರಾ ಗಾ೦ಧಿಯವರ ಸಮಯದಲ್ಲಿ ತಮ್ಮ ಎಲೈಸಿ ಹುದ್ದೆಯನ್ನು ತೊರೆದು ಸಮಾಜ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊ೦ಡು ಕಾ೦ಗ್ರೆಸ್ ಪಕ್ಷದತ್ತ ಆಸಕ್ತಿಯನ್ನು ಹೊ೦ದಿದ ಆಸ್ಕರ್ ಫೆರ್ನಾ೦ಡೀಸ್ ಪ್ರಥಮ ಬಾರಿಗೆ ಕಾ೦ಗ್ರೆಸ್ ಪಕ್ಷದಿ೦ದ ನೇರವಾಗಿ ಸ೦ಸದರಾಗಿ ಸ್ಪರ್ಧೆಗೆ ನಿ೦ತ ಇವರು ನಿರ೦ತರವಾಗಿ ಐದು ಬಾರಿಯಾದರು. ಈ ನಡುವೆ ಇ೦ದಿರಾಗಾ೦ಧಿಯವರ ಬಳಿಕ ರಾಜೀವ ಗಾ೦ಧಿಯವರ ಆಪ್ತರಾದ ಆಸ್ಕರ್ ಕೇ೦ದ್ರ ಸರಕಾರದ ಸಚಿವರಾಗಿಯೂ ಆಯ್ಕೆಯಾದರು.

ಇದೀಗ ಭಾನುವಾರದ೦ದು ತಮ್ಮ ನಿತ್ಯದ ಯೋಗ ಕಾರ್ಯಕ್ರಮವನ್ನು ಮಾಡುವಾಗ ಆಯಾತಪ್ಪಿ ಬಿದ್ದರು. ಏನಾಗಿಲ್ಲವೆ೦ಬ ಧೈರ್ಯದಲ್ಲಿದ್ದ ಆಸ್ಕರ್ ರವರು ಇದ್ದರಾದರೂ ಅದರೆ ಸಾಯ೦ಕಾಲ ತಲೆನೋವು ಕಾಣಿಸಿಕೊ೦ಡ ಕಾರಣ ಮ೦ಗಳೂರು ನಗರದ ಯೆನೆಪೊಯ ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದರು.

ತಪಾಸಣೆಯಲ್ಲಿ ವೈದ್ಯರು ಸ್ವಲ್ಪಮಟ್ಟಿಗೆ ತಲೆಯ ಒಳಭಾಗದಲ್ಲಿ ಪೆಟ್ಟಾಗಿದ್ದು ಶಸ್ತ್ರಚಿಕಿತ್ಸೆ ಅಗತ್ಯವಿದೆ. ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಬೇಕೆ೦ಬ ಕಾರಣದಿ೦ದಾಗಿ ಇವರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಚಿಕಿತ್ಸೆಯನ್ನು ನಡೆಸಲಾಗಿದ್ದು ಇವರು ಐಸಿಯುನಲ್ಲಿ ಇದ್ದಾರೆ೦ದು ವರದಿಯಾಗಿದೆ.

No Comments

Leave A Comment