Log In
BREAKING NEWS >
ಮ೦ಗಳವಾರದಿ೦ದ ಪಿತೃ ಪಕ್ಷದ ಆರ೦ಭ...

ಮೋಡರ್ನ್ ಸ್ಟೂಡಿಯೋದ ಮಾಲಕ ಅರುಣ್ ಎಂ. ಶಿರಾಲಿ ನಿಧನ

ಉಡುಪಿ ಜು.19: ಸುಮಾರು 50 ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ, ಮೋಡರ್ನ್ ಸ್ಟೂಡಿಯೋದ ಮಾಲಕ ಅರುಣ್ ಎಂ. ಶಿರಾಲಿ(74) ಯವರು ನಿಧನರಾಗಿದ್ದಾರೆ.

ಅಂದಿನ ಕಾಲದಲ್ಲಿ ಜೆಜೆ ಸ್ಕೂಲ್ ಆಫ್ ಆಟ್ರ್ಸ್‍ನಲ್ಲಿ ಡಿಪ್ಲೊಮಾ ಪದವೀಧರರಾಗಿದ್ದ ಮಂಗೇಶ್ ಶಿರಾಲಿ ಹಾಗೂ ಮಿತ್ರಾ ಶಿರಾಲಿ ದಂಪತಿಗಳ ಪುತ್ರರಾಗಿರುವ ಅರುಣ್ ಎಂ. ಶಿರಾಲಿ ಯವರು ತಂದೆಯ ಗರಡಿಯಲ್ಲಿಯೇ ಪಳಗಿದವರು.
ಕಪ್ಪು-ಬಿಳುಪು ಛಾಯಾಗ್ರಹಣದಲ್ಲಿ ಸುಮಾರು 30 ವರ್ಷಗಳ ಕಾಲ ತಮ್ಮನ್ನು ತಾವು ತೊಡಗಿಸಿಕೊಂಡು ಆ ಬಳಿಕ ವರ್ಣರಂಜಿತ ಛಾಯಾಗ್ರಹಣದಲ್ಲೂ ಸೈ ಎಸಿಸಿಕೊಂಡಿದ್ದರು. ಅಲ್ಲದೆ ಇವರು ನಾಡಿನ ವಿವಿದ ಪತ್ರಿಕೆಗಳಿಗೂ ಛಾಯಾಚಿತ್ರ ಪರೈಸುತ್ತಿದ್ದರು.

ಸುಮಾರು 30 ಜನ ಶಿಷ್ಯವೃಂದವನ್ನು ಹೊಂದಿರುವ ಇವರ ಮೋಡರ್ನ್ ಸ್ಟೂಡಿಯೋಕ್ಕೆ 100 ವರ್ಷಗಳ ಇತಿಹಾಸವಿದೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ. ಛಾಯಾಗ್ರಹಣ ದಿನಾಚರಣೆಯಂದು ಕೊಡಮಾಡುವ ಉಪ್ಪಾ, ಛಾಯಾ ಸ್ಪೂರ್ತಿ, ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಹಾಗೂ ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ ಶಂಕರನಾರಾಯಣ ದೇವಳದ ಜೀರ್ಣೋದ್ಧಾರದಲ್ಲಿ ಇವರು ತಮ್ಮನ್ನು ವಿಶೇಷವಾಗಿ ತೊಡಗಿಸಿಕೊಂಡಿದ್ದರು.

ಇವರ ಪತ್ನಿ ಗೀತಾ, ಪುತ್ರ ಮೇಜರ್ ಆನಂದ್ ಶಿರಾಲಿ, ಸೊಸೆ ವರ್ಷಾ ಹಾಗೂ ಮಗಳು ಕೃಪಾ, ಅಳಿಯ ಸಂತೋಷ್, ಮೊಮ್ಮಗಳು ಅನುಷಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

No Comments

Leave A Comment