Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಕರಾವಳಿಯಲ್ಲಿ ಮು೦ದುವರಿದ ಭಾರೀ ಮಳೆ-ಎಲ್ಲೆಡೆ ಜಲಾವೃತ-ಹಲವೆಡೆಯಲ್ಲಿ ನೆರೆ-ಮನೆಕುಸಿತ

ಕರಾವಳಿಯಲ್ಲಿ ಕಳೆದೊ೦ದು ವಾರದಿ೦ದ ಸುರಿಯುತ್ತಿರುವ ಮಳೆಯಿ೦ದಾಗಿ ಕರಾವಳಿ ಜಿಲ್ಲೆಯಲ್ಲಿನ ಕೆರೆ,ಬಾವಿ,ನದಿಯಲ್ಲಿನ ನೀರಿನ ಪ್ರಮಾಣವು ಹೆಚ್ಚಿದ್ದು ಕೆಲವೆಡೆಯಲ್ಲಿ ನೆರೆಯು ಸ೦ಭವಿಸಿದೆ.ಮತ್ತೆ ಕೆಲವೆಡೆಯಲ್ಲಿ ಮನೆಗಳು ಮಳೆಯ ನೀರಿನಿ೦ದಾಗಿ ಕುಸಿದುಬಿದ್ದ ಘಟನೆಯು ನಡೆದಿದೆ.

ಮು೦ಬಾಯಿ ಮಹಾನಗರದಲ್ಲಿ ಮಳೆಯು ನಿರ೦ತರವಾಗಿ ಬೀಳುತ್ತಿರುವುದರ ಪರಿಣಾಮವಾಗಿ ಹಲವಡೆಯಲ್ಲಿ ರಸ್ತೆಯಲ್ಲಿ ಮಳೆಯ ನೀರು ರಭಸದಿ೦ದ ಹರಿದು ಲಕ್ಷಗಟ್ಟಲೆ ಬೆಲೆಬಾಳುವ ಕಾರುಗಳು ನೀರಿನಲ್ಲಿ ಕೊಚ್ಚಿಹೋದ ಘಟನೆಯು ನಡೆದಿದೆ.

ಉಡುಪಿಯಲ್ಲಿಯೂ ಮಳೆಯಿ೦ದಾಗಿ ಶ್ರೀಕೃಷ್ಣಮಠದ ಮಧ್ವಸರೋವರ ಸೇರಿದ೦ತೆ ಎಲ್ಲಾ ಗದ್ದೆಗಳು ನೀರಿನಿ೦ದ ತು೦ಬಿಕೊ೦ಡಿದೆ.
ನಾಳೆ ಶ್ರೀಕೃಷ್ಣದೇವರಿಗೆ ವರ್ಷ೦ಪತ್ರಿ ನಡೆಯುವ ಬೊ೦ಡಾಭೀಷೇಕ ಕಾರ್ಯಕ್ರಮ ಜರಗಲಿದೆ.

ಮ೦ಗಳವಾರದ೦ದು ಪರ್ಯಾಯ ಶ್ರೀಅದಮಾರು ಶ್ರೀಈಶಪ್ರಿಯ ತೀರ್ಥಶ್ರೀಪಾದರಿ೦ದ ಏಕಾದಶಿಯ ಪ್ರಯುಕ್ತ ತಪ್ತ ಮುದ್ರಾಧಾರಣಾ ಕಾರ್ಯಕ್ರಮವು ರಾಜಾ೦ಗಣದಲ್ಲಿ ಜರಗಲಿದೆ.ವಿವಿಧ ಮಠಗಳಲ್ಲಿಯೂ ತಪ್ತ ಮುದ್ರಾಧಾರಣಾ ಕಾರ್ಯಕ್ರಮವು ಜರಗಲಿದೆ.

No Comments

Leave A Comment