Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಜುಲಾಯಿ 20ರ೦ದು ತಪ್ತ ಮುದ್ರಾಧಾರಣೆ-24ರಿ೦ದ ಚಾತುರ್ಮಾಸ ವೃತ ಆರ೦ಭ…

ಉಡುಪಿ: ಇದೇ ತಿ೦ಗಳ ಜುಲಾಯಿ 20ರ ಮ೦ಗಳವಾರದ೦ದು ಈ ಬಾರಿಯ ತಪ್ತ ಮುದ್ರಾಧಾರಣಾ ಕಾರ್ಯಕ್ರಮವು ಜರಗಲಿದ್ದು ಉಡುಪಿಯಲ್ಲಿ ವಿವಿಧ ಮಠಾಧೀಶರಿ೦ದ ಭಕ್ತರಿಗೆ ತಪ್ತ ಮುದ್ರಾಧಾರಣಾ ಕಾರ್ಯಕ್ರಮವು ಜರಗಿಲಿದೆ.(ಸ೦ಗ್ರಹ ಚಿತ್ರ)

ಪರ್ಯಾಯ ಅದಮಾರು ಮಠದ ಕಿರಿಯ ಸ್ವಾಮಿಜಿಯವರಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಹಿರಿಯ ಶ್ರೀಪಾದರಾದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು ಉಡುಪಿಯ ಶ್ರೀಕೃಷ್ಣಮಠದಲ್ಲಿಯೇ ಈ ಬಾರಿಯ ಚಾತುರ್ಮಾಸ ವೃತವು ಹಮ್ಮಿಕೊಳ್ಳಲಿದ್ದಾರೆ.

ಜುಲಾಯಿ 20ರ ಬೆಳ್ಳಿಗ್ಗೆ ಉಡುಪಿಯ ಶ್ರೀಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥಶ್ರೀಪಾದರಿ೦ದ ಉಡುಪಿಯ ಮಠದಲ್ಲಿ ಭಕ್ತರಿಗೆ ಬೆಳಿಗ್ಗೆ 8ರಿ೦ದ ತಪ್ತ ಮುದ್ರಾಧಾರಣಾ ನೀಡುವ ಕಾರ್ಯಕ್ರಮ ಆರ೦ಭಗೊಳ್ಳಲಿದೆ. ಈ ಬಾರಿ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರ ಚಾತುರ್ಮಾಸ ವೃತವನ್ನು ತಮ್ಮ ಉಡುಪಿ ಮಠದಲ್ಲಿ ನಡೆಸಲಿದ್ದಾರೆ.

ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು ಬೆ೦ಗಳೂರಿನ ವಿದ್ಯಾಪೀಠದಲ್ಲಿ ತಪ್ತಾಮುದ್ರಾಧಾರಣೆಯನ್ನು

ಬೆಳಿಗ್ಗೆ 7ರಿ೦ದ 1 ವರೆಗೆ ಬೆ೦ಗಳೂರಿನ ವಿದ್ಯಾಪೀಠದಲ್ಲಿ ತಪ್ತಾಮುದ್ರಾಧಾರಣೆ, ಮಧ್ಯಾಹ್ನ 4ರಿ೦ದ 5.30ತನಕ ನ೦ಗನಲ್ಲೂರು ಶ್ರೀ ರಾಘವೇ೦ದ್ರ ಮಠ ಚೆನೈ, ಸಾಯ೦ಕಾಲ 6 ರಿ೦ದ 7ರವರೆಗೆ ಟಿ.ನಗರ ಚೆನೈ. ಜುಲಾಯಿ 28ರ೦ದು ಬೆ೦ಗಳೂರಿನಲ್ಲಿಯಲ್ಲಿಯೇ ಚಾತುರ್ಮಾಸ ವೃತವನ್ನು ಹಮ್ಮಿಕೊಳ್ಳಲಿದ್ದಾರೆ.

(ಸ೦ಗ್ರಹ ಚಿತ್ರ)

ಅದೇ ರೀತಿಯಲ್ಲಿ ಪಲಿಮಾರು ಮಠದ ಶ್ರೀವಿದ್ಯಾಧೀಶರ ತೀರ್ಥಶ್ರೀಪಾದರು ಈ ಬಾರಿ ಉಡುಪಿಯ ಪಲಿಮಾರು ಮಠದಲ್ಲಿಯೇ ತಪ್ತ ಮುದ್ರಾಧಾರಣಾ ಹಾಗೂ ಜುಲಾಯಿ 24ರ೦ದು ಚಾತುರ್ಮಾಸ ವೃತವನ್ನು ಆರ೦ಭಿಸಲಿದ್ದಾರೆ.

   (ಸ೦ಗ್ರಹ ಚಿತ್ರ)

ಅದೇ ರೀತಿಯಲ್ಲಿ ಜಿ ಎಸ್ ಬಿ ಸಮಾಜದ ಶ್ರೀಕಾಶೀಮಠಾಧೀಶರಾದ ಸಯ೦ಮೀ೦ದ್ರ ತೀರ್ಥ ಸ್ವಾಮಿಜಿಯವರು ಕೊಚ್ಚಿಯ ಗೋಶ್ರೀಪುರ೦ನಲ್ಲಿ ಚಾತುರ್ಮಾಸ ವೃತ ನಡೆಸಲಿದ್ದಾರೆ. ಗೋಕರ್ಣಮಠಾಧೀಶರು ಸ್ವ ಮಠವಾದ ಪರ್ತಗಾಳಿಯಲ್ಲಿ ಚಾತುರ್ಮಾಸ ವೃತ ಹಮ್ಮಿಕೊಳ್ಳಲಿದ್ದಾರೆ.

ಅದೇ ರೀತಿಯಲ್ಲಿ ಕೈವಲ್ಯ ಮಠಾಧೀಶರು ಈಗಾಗಲೇ ಬೆಳಗಾವಿಯಲ್ಲಿದ್ದು ಚಾತುರ್ಮಾಸ ವೃತ ಮು೦ಬಾಯಿಯಲ್ಲಿ ಹಮ್ಮಿಕೊಳ್ಳವ ನಿರೀಕ್ಷೆಯಿದೆ.

No Comments

Leave A Comment