Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಜಮ್ಮು ಮತ್ತು ಕಾಶ್ಮೀರ: ಐಇಡಿ ಸ್ಫೋಟಕ ಪತ್ತೆ ಹಚ್ಚಿದ ಭದ್ರತಾ ಪಡೆ, ತಪ್ಪಿದ ಭಾರೀ ಅನಾಹುತ

ಶ್ರೀನಗರ: ಉಗ್ರರು ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟಕವನ್ನು(ಐಇಡಿ) ಪತ್ತೆ ಹಚ್ಚುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆ ಭಾರಿ ಅನಾಹುತವೊಂದನ್ನು ತಪ್ಪಿಸಿದೆ.

ಕುಲ್ಗಾಮ್‌ ಜಿಲ್ಲೆಯ ಕ್ವಾಜಿಗುಂಡ ಪ್ರದೇಶದ ದಾಮ್‌ಜೆನ್‌ ಎಂಬ ಗ್ರಾಮದ ಹೊರ ವಲಯದಲ್ಲಿ ಚಿನಾರ್‌ ಮರದ ಕೆಳಗೆ ಉಗ್ರರು ಸ್ಫೋಟಕವನ್ನು ಇಟ್ಟಿದ್ದರು. ಕೂಡಲೇ ಸ್ಫೋಟಕ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಲಾಗಿದ್ದು, ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಕ್ವಾಜಿಗುಂಡ ಪ್ರದೇಶದ ದಾಮ್‌ಜೆನ್‌ ಗ್ರಾಮದ ಹೊರಗೆ ಚಿನಾರ್‌ ಮರದ ಕೆಳಗೆ ಐಇಡಿ ಪತ್ತೆಯಾಗಿತ್ತು. ಬಾಂಬ್‌ ನಿಷ್ಕ್ರಿಯ ದಳದ ಸಹಾಯದಿಂದ ಐಇಡಿಯನ್ನು ನಿಷ್ಕ್ರಿಯಗೊಳಿಸಿ, ನಾಶ ಮಾಡಲಾಗಿದೆ’ ಎಂದು ಪೊಲೀಸ್‌ ವಕ್ತಾರ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

No Comments

Leave A Comment