Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿ ಶ್ರೀಕೃಷ್ಣಮಠಕ್ಕೆ ಶ್ರೀದತ್ತ ವಿಜಯಾನಂದ ಸ್ವಾಮೀಜಿ ಭೇಟಿ

ಉಡುಪಿ:ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಶಿಷ್ಯರಾದ ಶ್ರೀದತ್ತ ವಿಜಯಾನಂದ ಸ್ವಾಮೀಜಿಯವರು ಮ೦ಗಳವಾರದ೦ದು ಆಗಮಿಸಿದಾಗ ಅವರನ್ನು ವೇದಘೋಷ, ಮಂಗಳವಾದ್ಯದೊಂದಿಗೆ ಸ್ವಾಗತಿಸಿ, ದೇವರ ದರ್ಶನ ಮಾಡಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶ್ರೀದತ್ತ ವಿಜಯಾನಂದ ಸ್ವಾಮೀಜಿಯವರು, ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದಲ್ಲಿ ಹಿಂದೂ ಧರ್ಮವನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು ಆಶಿಸಿದರು.

ಪ್ರಪಂಚಕ್ಕೆ ಆವರಿಸಿದ ಮಹಾಮಾರಿ ಕೊರೊನವನ್ನು ನಿರ್ಮೂಲನೆಮಾಡಲು ವಿಶೇಷವಾಗಿ ದೇವರಲ್ಲಿ ಪ್ರಾರ್ಥನೆ ನಡೆಸುವದರೊಂದಿಗೆ ದೇಶದ ಎಲ್ಲಾ ಮಠಾಧೀಶರು ಅವರವರ ಸಿದ್ಧಾಂತವನ್ನು ಮಠಕ್ಕೆ ಸೀಮಿತಗೊಳಿಸಿ ಸನಾತನ ಧರ್ಮದ ವಿಷಯ ಬಂದಾಗ ಎಲ್ಲರೂ ಒಂದಾಗಿ ಧರ್ಮವನ್ನು ಉಳಿಸುವರೇ ಪ್ರಯತ್ನಿಸಬೇಕು ಎಂದು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಸಂದೇಶ ನೀಡಿದರು.

ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿoತಾಯರು ಸ್ವಾಗತಿಸಿದರು.

ಆಸ್ಥಾನ ವಿದ್ವಾಂಸರಾದ ಕುತ್ಪಾಡಿ ಕೃಷ್ಣರಾಜ ಆಚಾರ್ಯರು ಕಾರ್ಯಕ್ರಮ ನಿರ್ವಹಿಸಿ ಮಠದ ಪ್ರಧಾನ ವ್ಯವಸ್ಥಾಪಕರಾದ ಗೋವಿಂದರಾಜ್ ಧನ್ಯವಾದವನ್ನಿತ್ತರು, ಪಿ.ಆರ್.ಓ ಶ್ರೀಶ ಕಡೆಕಾರ್ ಹಾಗೂ ಶ್ರೀಕೃಷ್ಣ ಸೇವಾ ಬಳಗದ ಸದಸ್ಯರು ಉಪಸ್ಥಿತರಿದ್ದರು.

No Comments

Leave A Comment