Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮಾ ಹೃದಯಾಘಾತದಿಂದ ನಿಧನ

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು 1983ರ ವಿಶ್ವ ಕಪ್ ವಿಜೇತ ತಂಡದ ಸದಸ್ಯರಾಗಿದ್ದ ಯಶ್ ಪಾಲ್ ಶರ್ಮಾ ಹೃದಯಾ ಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸಾಗಿತ್ತು.  70  ಹಾಗೂ 80ರ ದಶಕದಲ್ಲಿ ಕ್ರಿಕೆಟ್ ವೃತ್ತಿಜೀವನದಲ್ಲಿ ಮಿಂಚಿದ್ದ ಮಾಜಿ ಪಂಜಾಬ್ ಆಟಗಾರ, ಆಗಸ್ಟ್ 11, 1954ರಲ್ಲಿ ಲೂದಿಯಾನದಲ್ಲಿ ಜನಿಸಿದ್ದರು.

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರರಾಗಿದ್ದ ಯಶ್ ಪಾಲ್ ಶರ್ಮಾ, ಭಾರತದ ಪರ 37 ಟೆಸ್ಟ್ ಪಂದ್ಯ ಗಳನ್ನಾಡಿದ್ದಾರೆ. 1979ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ ಅವರು, ಎರಡು ಶತಕಗಳೊಂದಿಗೆ 1606 ರನ್ ಗಳಿಸಿದ್ದರು. 9 ಅರ್ಧ ಶತಕಗಳೊಂದಿಗೆ 33 ಕ್ಕಿಂತ ಹೆಚ್ಚು ಸರಾಸರಿ ಅವರ ಹೆಸರಿನಲ್ಲಿದೆ.

1978ರಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದ ಯಶ್ ಪಾಲ್ ಶರ್ಮಾ, 28.48 ಸರಾಸರಿಯಲ್ಲಿ 883 ರನ್  ಕಲೆಹಾಕಿದ್ದಾರೆ. ರಣಜಿಯಲ್ಲಿ ಹರಿಯಾಣ, ರೈಲ್ವೆ ಸೇರಿದಂತೆ ಮೂರು ತಂಡಗಳನ್ನು ಪ್ರತಿನಿಧಿಸಿದ್ದರು. ಯಶ್ ಪಾಲ್ ಶರ್ಮಾ 160 ಪಂದ್ಯಗಳನ್ನಾಡಿದ್ದು, 21 ಶತಕಗಳು ಸೇರಿದಂತೆ ಒಟ್ಟಾರೇ 8,933 ರನ್ ಗಳಿಸಿದ್ದಾರೆ.

No Comments

Leave A Comment