Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಅಪಘಾತದಲ್ಲಿ ತೀವ್ರಗಾಯಗೊಂಡಿದ್ದ ತೆಲುಗು ಸಿನಿಮಾ ನಟ, ಚಿತ್ರ ವಿಮರ್ಶಕ ಕತ್ತಿ ಮಹೇಶ್ ನಿಧನ

ಬೆಂಗಳೂರು: ಕೆಲ ದಿನಗಳ ಹಿಂದೆ ಸಂಭವಿಸಿದ್ದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ತೆಲುಗು ನಟ, ಸಿನಿಮಾ ವಿಮರ್ಶಕ ಕತ್ತಿ ಮಹೇಶ್ ಶನಿವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಜೂನ್‌ 26ರಂದು ಅವರು ಚಲಾಯಿಸುತ್ತಿದ್ದ ಇನೋವಾ ಕಾರು ನೆಲ್ಲೂರು ಜಿಲ್ಲೆಯ ಕೊಡವಲೂರು ವಲಯದ ಚಂದ್ರಶೇಖರಪುರಂನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳಿ ಅಪಘಾತಕ್ಕೊಳಗಾಗಿತ್ತು. ಚಿತ್ತೂರಿನಿಂದ ಹೈದರಾಬಾದ್‌ ಕಡೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಈ ವೇಳೆ ಮಹೇಶ್ ಅವರಿಗೆ ತಲೆ  ಹಾಗೂ ಮೂಗಿಗೆ ಗಂಭೀರವಾಗಿ ಗಾಯಗಳಾಗಿದ್ದವು. ತಲೆ ಮತ್ತು ದೇಹಕ್ಕೆ ತೀವ್ರವಾದ ಹಿನ್ನಲೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು.

14 ದಿನಗಳ ಕಾಲ ದಿನಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿದ್ದ ಮಹೇಶ್ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಕೂಡ ಅಳವಡಿಸಲಾಗಿತ್ತು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕತ್ತಿ ಮಹೇಶ್ ಈ ಹಿಂದೆ, ‘ನೇನೆ ರಾಜು ನೇನೆ ಮಂತ್ರಿ’, ‘ಕ್ರ್ಯಾಕ್‌‘, ‘ಅಮ್ಮ ರಾಜ್ಯಂಲೋ ಕಡಪ ಬಿಡ್ಡಲು’ ಸೇರಿದಂತೆ ಹಲವು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಅಲ್ಲದೆ ಬಿಗ್‌ ಬಾಸ್‌ ಸೀಸನ್‌ 1ರಲ್ಲೂ ಅವರು ಭಾಗವಹಿಸಿದ್ದರು. ಯೂಟ್ಯೂಬ್ ನಲ್ಲಿ ಕತ್ತಿ ಮಹೇಶ್ ಸಿನಿಮಾ ವಿಮರ್ಶೆಗಳು ವ್ಯಾಪಕ ಸುದ್ದಿ  ಮಾಡುತ್ತಿದ್ದವು.

No Comments

Leave A Comment