Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ದಕ್ಷಿಣ ಅಫ್ಘಾನಿಸ್ತಾನದಲ್ಲಿ 109 ತಾಲೀಬಾನ್ ಉಗ್ರರ ಹತ್ಯೆ

ಕಾಬೂಲ್: ಯುದ್ಧಗ್ರಸ್ತ ಆಪ್ಘಾನಿಸ್ತಾನದ ದಕ್ಷಿಣ ಪ್ರಾಂತ್ಯದಲ್ಲಿ ಅಫ್ಘಾನಿಸ್ತಾನದ ರಕ್ಷಣಾ ಹಾಗೂ ಭದ್ರತಾ ಪಡೆಗಳು (ಎಎನ್ ಡಿಎಸ್ ಎಫ್) ನಡೆಸಿದ ದಾಳಿಗೆ 109 ಮಂದಿ ತಾಲೀಬಾನ್ ಉಗ್ರರು ಸಾವನ್ನಪ್ಪಿದ್ದು 25 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಅಫ್ಘಾನ್ ನ 2 ದಕ್ಷಿಣ ಪ್ರಾಂತ್ಯದಲ್ಲಿ ನಡೆದಿರುವ ಈ ಘಟನೆಯನ್ನು ಸೇನೆ ಜು.10 ರಂದು ವರದಿ ಮಾಡಿದೆ.

ಕಂದಹಾರ್ ಪ್ರಾಂತ್ಯದಲ್ಲಿ 70 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದ್ದರೆ 8 ಮಂದಿ ಇತರರು ಗಾಯಗೊಂಡಿದ್ದಾರೆ.

ಅಫ್ಘಾನ್ ವಾಯು ಪಡೆ (ಎಎಎಫ್) ನ ಸಹಕಾರದಲ್ಲಿ ಎಎನ್ ಡಿಎಸ್ ಎಫ್ ಈ ಕಾರ್ಯಾಚರಣೆ ನಡೆಸಿದೆ.

ಪ್ರಾಂತೀಯ ರಾಜಧಾನಿ ಕಂದಹಾರ್ ನಗರದ ಪೊಲೀಸ್ ಜಿಲ್ಲೆ 7   ಹಾಗೂ ನೆರೆಯ ಸಬ್ ಅರ್ಬನ್ ದಾಂಡ್ ಜಿಲ್ಲೆಯಲ್ಲಿ  ಸೇನೆಯ ಕಾರ್ಯಾಚರಣೆ ಬಗ್ಗೆ ಸೇನೆಯ 205 ಅಟ್ಟಾಲ್ ಕಾರ್ಪ್ಸ್ ಹೇಳಿಕೆ ಬಿಡುಗಡೆ ಮಾಡಿದೆ.

ಇದಕ್ಕೂ ಮುನ್ನ ಶುಕ್ರವಾರದಂದು ತಾಲೀಬಾನ್ ಎಎನ್ ಡಿಎಸ್ ಎಫ್ ನ ಸ್ಥಾನಗಳ ಮೇಲೆ ದಾಳಿ ನಡೆಸಿ ಕಂದಹಾರ್ ನಗರಕ್ಕೆ ನುಸುಳಲು ಯತ್ನಿಸಿತ್ತು. ಪರಿಣಾಮ ದಿನವಿಡೀ ಯುದ್ಧಗ್ರಸ್ತ ವಾತಾವರಣ ನಿರ್ಮಾಣವಾಗಿತ್ತು.

ಈ ವೇಳೆ ಹೆಲ್ಮಾಂಡ್ ಪ್ರಾಂತ್ಯದಲ್ಲಿ 39 ತಾಲೀಬಾನ್ ಉಗ್ರರನ್ನು ಹತ್ಯೆ ಮಾಡಲಾಗಿತ್ತು, ಕಾರ್ಯಾಚರಣೆಯಲ್ಲಿ 17 ಮಂದಿ ಗಾಯಗೊಂಡಿದ್ದರು. ಸ್ಥಳೀಯವಾಗಿ ತಾಲೀಬಾನ್ ಗೆ ಪ್ರಮುಖವಾಗಿದ್ದ  ಇಬ್ಬರು ನಾಯಕರನ್ನು ಹತ್ಯೆ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಪೈಕಿ ಉಂಟಾಗಿರುವ ಪ್ರಾಣಹಾನಿಯ ಬಗ್ಗೆ ಈ ವರೆಗೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

No Comments

Leave A Comment