Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಬ್ರಹ್ಮಾವರ: ದೇವಸ್ಥಾನಕ್ಕೆ ಆತ್ಮಹತ್ಯೆ ಪತ್ರ ಬರೆದು ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಬ್ರಹ್ಮಾವರ, ಜು 10. ಕಾಮೇಶ್ವರ ದೇವಸ್ಥಾನದ ಹೆಸರಿಗೆ ರಿಜಿಸ್ಟರ್ ಪತ್ರದ ಮೂಲಕ ಆತ್ಮಹತ್ಯೆಗೆ ಪತ್ರ ರವಾನಿಸಿ ನಾಪತ್ತೆಯಾಗಿದ್ದ ಬೈಕಾಡಿಯ ದೇವಸ್ಥಾನದ ವಠಾರದ ನಿವಾಸಿಯಾದ ಶ್ರೀಧರ್ ಮಯ್ಯ(60) ಅವರ ಮೃತದೇಹ ಸಂತೆಕಟ್ಟೆ ಬಳಿಯ ಉಪ್ಪೂರು ನದಿಯಲ್ಲಿ ಜು.10 ರ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.

ಶ್ರೀಧರ್ ಮಯ್ಯ ಅವರ ಮೃತದೇಹವನ್ನು ಪತ್ನಿ ಮತ್ತು ಮಗಳು ಗುರುತಿಸಿದ್ದಾರೆ. ಶ್ರೀಧರ್ ಮಯ್ಯ ಅವರು ಶುಕ್ರವಾರ ನದಿಗೆ ಹಾರಿರಬಹುದು ಎಂದು ಪೊಲೀಸರು ಶಂಕಿಸಿದ್ದು , ನದಿಯಲ್ಲಿ ಮೃತದೇಹವನ್ನು ಬೆಳಿಗ್ಗೆ ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರ ಸಹಾಯದಿಂದ ಶವವನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

No Comments

Leave A Comment