Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ ಸೇರಿದ 4 ವರ್ಷದ ಬಾಲಕಿ ಹೆಸರು

ಯೋಗ ಭಂಗಿಗಳನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದೆಷ್ಟೋ ವರ್ಷಗಳ ಕಲಿಕೆ ಮುಖ್ಯ. ಜತೆಗೆ ಸತತ ಪ್ರಯತ್ನದ ಮೂಲಕ ಹಂತ ಹಂತವಾಗಿ ಸಾಧಿಸಬೇಕು. ಹಾಗಾದಾಗ ಮಾತ್ರ ಕಷ್ಟಕರವಾದ ಯೋಗ ಭಂಗಿಯನ್ನು ನಿರ್ವಹಿಸಲು ಸಾಧ್ಯ. ಇಲ್ಲೋರ್ವ 4 ವರ್ಷದ ಬಾಲಕಿ ಅತಿ ಸುಲಭದಲ್ಲಿ ಯೋಗ ಭಂಗಿಗಳನ್ನು ನಿರ್ವಹಿಸುತ್ತಾಳೆ. ನಿಜವಾಗಿಯೂ ಆಶ್ಚರ್ಯವಾಗುವಂತಿದೆ. ಇವಳ ಈ ಸಾಧನೆಗೆ ಏಷ್ಯಾ ಬುಕ್​ ಅಫ್​ ರೆಕಾರ್ಡ್​ನಲ್ಲಿ ಇವಳ ಹೆಸರು ದಾಖಲಾಗಿದೆ. 

ಒಡಿಶಾದ 4 ವರ್ಷದ ಬಾಲಕಿ ಎಷ್ಟು ಕಷ್ಟದ ಯೋಗ ಭಂಗಿಗಳನ್ನೂ ಸಹ ಅತಿ ಸುಲಭದಲ್ಲಿ ಪ್ರಯತ್ನಿಸುವ ಮೂಲಕ ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ಗೆ ಸ್ಥಾನ ಪಡೆದುಕೊಂಡಿದ್ದಾಳೆ. 4 ವರ್ಷದ ಪುಟ್ಟ ಬಾಲಕಿಯ ಹೆಸರು ಪ್ರಿಯಾ ಪ್ರಿಯದರ್ಶಿನಿ ನಾಯಕ್. ಇವಳ ತಂದೆ ಪ್ರಕಾಶ್​ ಯೋಗ ತರಗತಿಗಳನ್ನು ಹೇಳಿಕೊಡುತ್ತಿದ್ದರು. ಅವರ ವಿದ್ಯಾರ್ಥಿಗಳಿಗೆ ಕಲಿಸುವ ತರಗತಿಯಲ್ಲಿ ಪುಟ್ಟ ಬಾಲಕಿ ಪ್ರಿಯಾ ಭಾಗಿಯಾಗುತ್ತಿದ್ದಳು. ಯೋಗ ಆಸನಗಳನ್ನು ಪ್ರಯತ್ನಿಸುವಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಳು. ತಂದೆಯ ಹೇಳಿಕೊಟ್ಟಂತೆಯೇ ಅಭ್ಯಾಸ ಮಾಡುತ್ತಾ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ತಂದೆ ಪ್ರಕಾಶ ಅವರು ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ವೇಳೆ, ತಂದೆ ಯೋಗ ಭಂಗಿಗಳನ್ನು ಮಾಡುತ್ತಿದ್ದಂತೆಯೇ ಪ್ರಿಯಾ ಕೂಡಾ ತಂದೆಯನ್ನು ಅನುಕರಿಸುತ್ತಿದ್ದಳು. ಬಳಿಕ ಆಕೆಯ ಆಸಕ್ತಿಯನ್ನು ಗಮನಿಸಿದ ಪ್ರಕಾಶ್​ ಅವರು, ಮಗಳಿಗೆ ತರಬೇತಿ ನೀಡಿದರು. ಎಷ್ಟು ಕಷ್ಟದ ಆಸನಗಳನ್ನೂ ಸಹ ಪುಟ್ಟ ಬಾಲಕಿ ಅತಿ ಸುಲಭದಲ್ಲಿ ನಿರ್ವಹಿಸುತ್ತಾಳೆ. ಪ್ರಿಯಾ ದೇಶಕ್ಕಾಗಿ ಪದಕಗಳನ್ನು ಗೆಲ್ಲಬೇಕು ಎಂಬುದು ತಂದೆ ಪ್ರಕಾಶ್​ ಅವರ ಆಶಯ. ಈ ಉದ್ದೇಶದಿಂದ ತನ್ನ ಮಗಳಿಗಾಗಿ ಯೋಗ ತರಗತಿಯನ್ನು ನೀಡುತ್ತಿದ್ದಾರೆ.

No Comments

Leave A Comment