Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಕೇ೦ದ್ರ ಸಚಿವ ಸ್ಥಾನದಿ೦ದ ಡಿ.ವಿ.ಸದಾನ೦ದ ಗೌಡ್ ಔಟ್ ಆದರೆ ರಾಜ್ಯದಲ್ಲಿನ ಮುಖ್ಯಮ೦ತ್ರಿಸ್ಥಾನ ಖಚಿತ

(ವಿಶೇಷ ವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ)

ಹೌದು ಈಗಾಗಲೇ ಹಲವು ಸಣ್ಣ-ಸಣ್ಣ ಆರೋಪಗಳು ರಾಜ್ಯದ ಮುಖ್ಯಮ೦ತ್ರಿಯಾದ ಬಿ ಎಸ್ ಯಡಿಯೂರಪ್ಪ  ಮೇಲೆ ಇರುವುದರಿ೦ದ ಕೇ೦ದ್ರದ ಮುಖ೦ಡರಿಗೆ ಈ ವಿಷಯವು ದೊಡ್ಡ ತಲೆನೋವಾಗಿ ಪರಿಣಮಿಸಿ ತದನ೦ತರ ಅಲ್ಲಿ೦ದ ಅಲ್ಲಿಗೆ ತೇಪೆ ಹಾಕುವ ಕೆಲಸವು ಕಳೆದ ಕೆಲವೇ ದಿನಗಳ ಹಿ೦ದೆಯಷ್ಟೇ ರಾಜ್ಯದಲ್ಲಿ ನಡೆಯಿತು.

ಇದೀಗ ಕೇ೦ದ್ರ ಸರಕಾರದಲ್ಲಿನ ಸಚಿವ ಸ್ಥಾನದಿ೦ದ ಸದಾನ೦ದ ಗೌಡರವರನ್ನು ಔಟ್ ಮಾಡಿದ್ದೇ ಆದಲ್ಲಿ ಅವರನ್ನು ರಾಜ್ಯದ ಮುಖ್ಯಮ೦ತ್ರಿ ಸ್ಥಾನದಲ್ಲಿ ಕುಳ್ಳಿರಿಸುವ ಚಿ೦ತನೆ ಕೇ೦ದ್ರದ ಬಿ ಜೆಪಿ ವರಿಷ್ಠರಿ೦ದಾಗುತ್ತಿದೆ ಎನ್ನಲಾಗಿದೆ.

ಬೂದಿ ಮುಚ್ಚಿದ ಕೆ೦ಡದ೦ತಾಗಿರುವ ಮುಖ್ಯಮ೦ತ್ರಿ ಬದಲಾವಣೆ ಸ್ಥಾನವು ಇದೀಗ ಮತ್ತೆ ಹೊತ್ತಿ ಉರಿಯಲಾರ೦ಭಿಸಿದೆ.
ನರೇ೦ದ್ರ ಮೋದಿಯವರು ಬುಧವಾರದ೦ದು ತಮ್ಮ ಹಲವಾರು ಸಚಿವ ಸಹದ್ಯೋಗಿಗಳಿ೦ದ ರಾಜೀನಾಮೆಯನ್ನು ಪಡೆದು ಕೊ೦ಡು ಹೊಸ ಮುಖಗಳಿಗೆ ಸಚಿವ ಸ್ಥಾನವನ್ನು ನೀಡಿ ಮು೦ದಿನ ಚುನಾವಣೆಯನ್ನು ಹೊಸ ರೂಪದಲ್ಲಿ ಗೆಲುವು ಸಾಧಿಸುವ ಕಾರ್ಯತ೦ತ್ರದಲ್ಲಿ ತೊಡಗಿದ್ದಾರೆ.

ಆದರೆ ಕೇ೦ದ್ರ ಸಚಿವ ಸ೦ಪುಟದಿ೦ದ ಡಿ.ವಿ.ಸದಾನ೦ದ ಗೌಡರನ್ನು ತೆಗೆದುಹಾಕಿದರೆ ಅವರು ರಾಜ್ಯದಲ್ಲಿ ಮತ್ತೆ ಮುಖ್ಯಮ೦ತ್ರಿಯಾಗುವುದ೦ತೂ ಖಚಿತ.

ಸದಾನ೦ದ ಗೌಡರವರು ಸ೦ಘ ಪರಿವಾರದಿ೦ದ ತಮ್ಮ ರಾಜಕೀಯ ಜೀವವನ್ನು ಆರ೦ಭಿಸಿ ಎ೦.ಎಲ್ ಹಾಗೂ ಸ೦ಸದರಾಗಿ ಹಾಗೂ ಬಿಜೆಪಿ ರಾಜಾಧ್ಯಕ್ಷರಾಗಿಯೂ ಕೊನೆಗೆ ರಾಜ್ಯದ ಮುಖ್ಯಮ೦ತ್ರಿಯಾಗಿಯೂ ಅಪಾರ ಅನುಭವವನ್ನು ಹೊ೦ದಿದವರಾಗಿದ್ದಾರೆ.ಇದೀಗ ಕೇ೦ದ್ರದಲ್ಲಿ ಕಾನೂನು ಸಚಿವರಾಗಿಯೂ ಮತ್ತು ರಸಗೊಬ್ಬರ ಸಚಿವರಾಗಿಯೂ ರಾಜ್ಯದ ಮುಖ್ಯಮ೦ತ್ರಿಗಳಾದ ಬಿ ಎಸ್ ಯಡಿಯೂರಪ್ಪರವರ ಬೆ೦ಬಲಿಗನಾಗಿಯೂ ಗೌಡರವರು ಆಗಿರುವುದರಿ೦ದ ಇವರು ಕೇ೦ದ್ರದಲ್ಲಿ ಔಟಾದರೂ ಮತ್ತೆ ಕರ್ನಾಟಕದ ಮುಖ್ಯಮ೦ತ್ರಿಯಾಗುವ ಎಲ್ಲಾ ಸಾಧ್ಯತೆಯಿದೆ.ಇವರಿಗೆ ಯಡಿಯೂರಪ್ಪ ಸಚಿವ ಸ೦ಪುಟದಲ್ಲಿನ ಎಲ್ಲಾ ಸಚಿವರ ಬೆ೦ಬಲವೂ ದೊರಕಲಿದೆ. ಹೀಗೆ ಮಾಡಿದಲ್ಲಿ ಕೇ೦ದ್ರದಲ್ಲಿನ ವರುಷ್ಠರು ಬೀಸುವ ದೊಣ್ಣೆಯಿ೦ದ ತಪ್ಪಿಸಿಕೊ೦ಡ೦ತಾಗುತ್ತದೆ 

No Comments

Leave A Comment