BREAKING NEWS >
ನ.29ರ೦ದು ಶ್ರೀಕ್ಷೇತ್ರಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರ೦ಭ...

28 ಮಂದಿ ಪ್ರಯಾಣಿಸುತ್ತಿದ್ದ ರಷ್ಯಾದ ಎಎನ್-26 ವಿಮಾನ ನಾಪತ್ತೆ

ಮಾಸ್ಕೋ, ಜು.05: ರಷ್ಯಾದ ಎಎನ್-26 ವಿಮಾನದಲ್ಲಿ 28 ಮಂದಿ ಪ್ರಯಾಣಿಸುತ್ತಿದ್ದು, ಇದು ರಷ್ಯಾದ ಪೂರ್ವಭಾಗದಿಂದ ಮಂಗಳವಾರ ನಾಪತ್ತೆಯಾಗಿರುವ ಘಟನೆ ನಡೆದಿರುವುದಾಗಿ ದೇಶದ ತುರ್ತು ಸಚಿವಾಲಯ ಮಾಹಿತಿ ನೀಡಿದೆ ಎಂದು ವರದಿ ತಿಳಿಸಿದೆ.

ಸಾಂಧರ್ಭಿಕ ಚಿತ್ರ

ಎಎನ್ 26 ವಿಮಾನ ಭೂಸ್ಪರ್ಶ ಮಾಡುವ ಪ್ರಯತ್ನದಲ್ಲಿರುವ ವೇಳೆಯಲ್ಲಿಯೇ ಸಂಪರ್ಕ ಕಳೆದುಕೊಂಡಿರುವುದಾಗಿ ವರದಿ ಹೇಳಿದೆ.

ಇನ್ನು ಈ ವಿಮಾನ ಪೆಟ್ರೋಪವ್ಲೊವಸ್ಕ್‌‌ನಿಂದ ಕಾಮ್ಚಾಟ್ಸಿಕಿಯಲ್ಲಿರುವ ಪಲಾನಾ ಗ್ರಾಮದ ಮಾರ್ಗದ ಸಮೀಪದಲ್ಲಿರುವಾಗ ವಾಯು ಸಂಚಾರ ನಿಯಂತ್ರಣ ವಿಭಾಗದ ಜತೆಗಿನ ಸಂಪರ್ಕ ಕಳೆದುಕೊಂಡಿತ್ತು ಎಂದು ಸಚಿವಾಲಯ ವಿವರಿಸಿದೆ.

ರಕ್ಷಣಾ ಮತ್ತು ಶೋಧಕಾರ್ಯಾಚರಣೆ ತಂಡವು ಘಟನೆ ನಡೆದ ಸ್ಥಳಕ್ಕೆ ತೆರಳುತ್ತಿದ್ದು, ವಿಮಾನದಲ್ಲಿ ಆರು ಮಂದಿ ಸಿಬಂದಿಗಳು ಹಾಗೂ 22 ಮಂದಿ ಪ್ರಯಾಣಿಕರಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಘಟನೆ ನಡೆದ ಪ್ರದೇಶದಲ್ಲಿ ಮೋಡ ಮುಸುಕಿದ ವಾತಾವರಣ ಇದ್ದಿರುವುದಾಗಿ ಹವಾಮಾನ ಇಲಾಖೆ ತಿಳಿಸಿರುವುದಾಗಿ ವರದಿಯಾಗಿದೆ.

No Comments

Leave A Comment