Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಖ್ಯಾತ ನಟಿ, ಕ್ರೀಡಾ ನಿರೂಪಕಿ ಮಂದಿರಾ ಬೇಡಿ ಪತಿ, ನಿರ್ಮಾಪಕ ರಾಜ್ ಕೌಶಾಲ್ ನಿಧನ

ಮುಂಬೈ: ಖ್ಯಾತ ನಟಿ ಹಾಗೂ ಕ್ರೀಡಾ ನಿರೂಪಕಿ ಮಂದಿರಾಬೇಡಿ ಅವರ ಪತಿ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ರಾಜ್ ಕೌಶಾಲ್ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಬುಧವಾರ ಬೆಳಗ್ಗೆ ರಾಜ್ ಕೌಶಾಲ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟುಹೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ರಾಜ್ ಕೌಶಾಲ್ ಅವರ ನಿಧನ ಸಮಾಚಾರವನ್ನು ನಿರ್ದೇಶಕ ಒನಿರ್ ಅವರು ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿದ್ದು, ನನ್ನ ಸಹೋದರ ರಾಜ್ ಕೌಶಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲು ದುಃಖವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇಂದು ಬೆಳಗ್ಗೆ 4.30ರ ಸುಮಾರಿನಲ್ಲಿ ರಾಜ್ ಕೌಶಾಲ್ ಅವರಿಗೆ ಹೃದಯಾಘಾತವಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ರಾಜ್ ಕೌಶಲ್ ಬಾಲಿವುಡ್ ನಿರ್ಮಾಪಕರಾಗಿದ್ದು, ಅವರು ನಟರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಪ್ಯಾರ್ ಮೇ ಕಬಿ ಕಭಿ, ಶಾದಿ ಕಾ ಲಡ್ಡೂ ಮತ್ತು ಆಂಥೋನಿ ಕೌನ್ ಹೈ ಎಂಬ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದರು. ಕೌಶಲ್ ಅವರ ಕೊನೆಯ ನಿರ್ದೇಶನದ ಚಿತ್ರವೆಂದರೆ 2006 ರ ಥ್ರಿಲ್ಲರ್  “ಆಂಥೋನಿ ಕೌನ್ ಹೈ?”, ಇದರಲ್ಲಿ ಅರ್ಷದ್ ವಾರ್ಸಿ ಮತ್ತು ಸಂಜಯ್ ದತ್ ನಟಿಸಿದ್ದರು. ಮೈ ಬ್ರದರ್ ನಿಖಿಲ್, ಶಾದಿ ಕಾ ಲಡ್ಡೂ ಮತ್ತು ಪ್ಯಾರ್ ಮೇ ಕಭಿ ಕಭಿ ಚಿತ್ರಗಳಿಗೆ ಕೌಶಾಲ್ ನಿರ್ಮಾಪಕರಾಗಿದ್ದರು.

No Comments

Leave A Comment