Log In
BREAKING NEWS >
ನವೆ೦ಬರ್ 22ರಿ೦ದ ನವೆ೦ಬರ್ 27ರವರೆಗೆ ಉಡುಪಿಯ ಮಹತೋಭಾರ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವ ಜರಗಲಿದೆ....,,,ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....

ಕಾಡು ಹಂದಿ ದಾಳಿ : ಕೃಷಿಕನೋರ್ವ ಮೃತ್ಯು

ಸೋಮವಾರಪೇಟೆ : ಮಡಿಕೇರಿ ಜಿಲ್ಲೆಯ ಸೋಮವಾರ ಪೇಟೆ ಬಳಿ ಕಾಡು ಹಂದಿಯೊಂದು ಕೃಷಿಕನಿಗೆ ದಾಳಿ ಮಾಡಿ ಆ ದಾಳಿಯಿಂದ ಕೃಷಿಕನೋರ್ವ ಮೃತಪಟ್ಟಿರುವ ಘಟನೆ ಕಿರಗಂದೂರು ಗ್ರಾಮದಲ್ಲಿ ನಡೆದಿದೆ.

ಎಸ್‌. ಎಲ್.ಪೂವಯ್ಯ ಎಂಬುವರ ಪುತ್ರ ಎಸ್.ಪಿ. ಕುಶಾಲಪ್ಪ(43) ಮೃತಪಟ್ಟ ವ್ಯಕ್ತಿ ಎಂದು ತಿಳಿಯಲಾಗಿದೆ.

ಸೋಮವಾರ  ಬೆಳಿಗ್ಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಕಾಡುಹಂದಿ ದಾಳಿ ಮಾಡಿದೆ. ತೊಡೆಯ ಭಾಗದಲ್ಲಿ ಸೀಳಿದ ಗಾಯವಾಗಿದ್ದು, ವೃಷಣಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಪತ್ನಿ ಮಧ್ಯಾಹ್ನ ಫೋನ್ ಮಾಡಿದ ಸಂದರ್ಭ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತೋಟದಲ್ಲಿ ಹುಡುಕಾಟ ನಡೆಸಿದ ಸಂದರ್ಭ ಮೃತದೇಹ ಪತ್ತೆಯಾಗಿದೆ.

ಗ್ರಾಮದ ಹಿರಿಯರು ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ಕಾಡುಹಂದಿಯ ಹೆಜ್ಜೆಗಳು ಗೋಚರಿಸಿದ್ದು, ಕುಟುಂಬದವರು ಸೋಮವಾರಪೇಟೆ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಡಿ.ಅರ್.ಎಫ್. ಒ.ಜಗದೀಶ್ ಭೇಟಿ ನೀಡಿದ್ದಾರೆ. ಶವಪರೀಕ್ಷೆಯ ನಂತರ ನಿಕರ ಕಾರಣ ತಿಳಿಯಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

No Comments

Leave A Comment