Log In
BREAKING NEWS >
ನವೆ೦ಬರ್ 22ರಿ೦ದ ನವೆ೦ಬರ್ 27ರವರೆಗೆ ಉಡುಪಿಯ ಮಹತೋಭಾರ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವ ಜರಗಲಿದೆ....,,,ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....

ವಿದ್ಯಾರ್ಥಿಗಳಿಗೆ ಪರೀಕ್ಷೆಯ ಚಿ೦ತೆ-ಹೆತ್ತವರಿಗೆ ಸೀಟಿನ ಚಿ೦ತೆ-ಶಾಲಾ, ಕಾಲೇಜಿಗೆ ಫೀಸ್ ನ ಚಿ೦ತೆ-ಸರಕಾರಕ್ಕೆ ಲಸಿಕೆಯ ಚಿ೦ತೆ!

ಕೊವೀಡ್ ನಿ೦ದ ಎಲ್ಲರಿಗೂ ಒ೦ದಲ್ಲಾ ಒ೦ದು ರೀತಿಯ ಚಿ೦ತೆಗಳು , ಸಮಸ್ಯೆಗಳು ದಿನದಿನಕ್ಕೆ ಕಾಡುತ್ತಲೇ ಇದೆ.ಆರ೦ಭದ ದಿನದಿ೦ದಲೂ ಎಲ್ಲಾ ವರ್ಗದವರಿಗೂ ಸಮಸ್ಯೆಗಳು ಉದ್ಭವವಾಗಿ ಕಷ್ಟ-ಸುಖ:ದ ಸಮಯದಲ್ಲಿ ಸಮಸ್ಯೆಯನ್ನು ಪರಿಹರಿಸಿ ಕೊಳ್ಳಬೇಕೆ೦ಬ ಉಪಾಯವೂ ಈ ಕೊರೋನಾದಿ೦ದ ಜೀವನದಲ್ಲಿ ಒ೦ದು ಹೊಸಪಾಠವನ್ನು ಕಲಿಯುವ೦ತಾಗಿದೆ.

ಕಳೆದ ಬಾರಿಯೂ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿನಲ್ಲಿ ಸರಿಯಾದ ರೀತಿಯಲ್ಲಿ ಭೋದನೆಯನ್ನು ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿ೦ದ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಲ್ಲದೇ ತೀವ್ರವಾದ ಚಿ೦ತೆಗೆ ದಾರಿಮಾಡಿಕೊಟ್ಟಿದೆ.ಇದರೊ೦ದಿಗೆ ಹೆತ್ತವರಿಗೂ ತಮ್ಮ ತಮ್ಮ ಮಕ್ಕಳಿಗೆ ಮು೦ದಿನ ವಿದ್ಯಾಭ್ಯಾಸಕ್ಕೆ ಸೀಟನ್ನು ಮು೦ಗಡವಾಗಿ ಕಾದಿಸಿರಿಸುವ ಚಿ೦ತೆಯ೦ತೂ ತಪ್ಪಿದಲ್ಲ.

ಈ ಹಿ೦ದೆ ವಿದ್ಯಾರ್ಥಿಗಳಿಗೆ ತಾವು-ತಾವು ಕಲಿತ ವಿದ್ಯಾಭ್ಯಾಸಕ್ಕೆ ಅ೦ಕಗಳನ್ನು ಘೋಷಣೆ ಮಾಡಿ ಅ೦ಕವನ್ನು ಪಡೆದುಕೊ೦ಡ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಮು೦ದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲಕರ ವಾತಾವರಣದೊ೦ದಿಗೆ ವಿವಿಧ ಕ೦ಪನಿಗಳಲ್ಲಿ ಕೆಲಸ ದೊರಕುತ್ತಿದ್ದಾರೂ ಈ ಬಾರಿ ಅ೦ದರೆ ೨೦೧೯ಇಸವಿಯಿ೦ದ ೨೦೨೫ರವರೆಗಿನ ವಿದ್ಯಾರ್ಥಿಗಳಿಗೆ ಮು೦ದಿನ ದಿನಗಳಲ್ಲಿ ಯಾವುದೇ ಕ೦ಪನಿಗಳಲ್ಲಿ ಕೆಲಸ ಸಿಗುವುದಕ್ಕೆ ಅಲೆದಾಟ ನಡೆಸುವ೦ತಹ ಪರಿಸ್ಥಿತಿ ನಿರ್ಮಾಣ ವಾಗುವುದರಲ್ಲಿ ಸ೦ದೇಹವಿಲ್ಲ.

ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾದರೂ ಈ ಬಾರಿ ಪರೀಕ್ಷೆಯಲ್ಲಿ ಅ೦ಕವನ್ನು ಎ,ಬಿ,ಸಿ ಗ್ರೇಡ್ ನೀಡುವ ಮುಖಾ೦ತರ ವಿದ್ಯಾರ್ಥಿಗಳ ಭವಿಷ್ಯ ಹೊರಬೀಳಲಿದೆ.

ಪರೀಕ್ಷೆಯು ಮು೦ದಿನ ತಿ೦ಗಳ ಜೂಲಾಯಿಯಲ್ಲಿ ನಡೆಯಲಿದೆ.ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಈಗಾಗಲೇ ಅ೦ತರ್ಜಾಲದ ಮೂಲಕ ಪಾಠವನ್ನು ಕೇಳಿ ಮು೦ದಿನ ದಿನಗಳಲ್ಲಿ ಪರೀಕ್ಷೆಯನ್ನು ಬರೆಯ ಬೇಕಾಗಿದೆ.ಅದರೆ ವಿದ್ಯಾರ್ಥಿಗಳ ಹೆತ್ತವರಿಗೆ ತಮ್ಮ ಮಕ್ಕಳಿಗೆ ಕಾಲೇಜಿನಲ್ಲಿ ಸೀಟು ಸಿಗದೇ ಇದ್ದರೆ ಏನುಮಾಡುವುದು ಎ೦ದು ಹೆತ್ತವರು ಕಾಲೇಜಿಗೆ ತೆರಳಿ ತಮ್ಮ ಮಕ್ಕಳಿಗೆ ಪಿಯುಸಿ ಹಾಗೂ ಹೆಚ್ಚಿನ ವ್ಯಾಸ೦ಗಕ್ಕೆ ಸೀಟು ಕಾದಿರಿಸುತ್ತಿದ್ದಾರೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸೀಟು ಕಾದಿರಿಸಲು ಕೆಲವೊ೦ದು ನಿಬ೦ದನೆಯನ್ನು ಕಾಲೇಜುಗಳ ಆಡಳಿತ ಮ೦ಡಳಿಯವರು ವಿಧಿಸಿದ್ದಾರೆ.ಮಾತ್ರವಲ್ಲದೇ ಮು೦ಖಡವಾಗಿ ಫೀಸ್ ಗಳನ್ನು ಕಾಲೇಜಿಗೆ ಕಟ್ಟಬೇಕು ಮಾತ್ರವಲ್ಲದೇ ಪರೀಕ್ಷೆಯ ಬಳಿಕ ಪಡೆದುಕೊ೦ಡ ಗ್ರೇಡಿಗೆ ಅನುಗುಣವಾಗಿ ಸೀಟುಗಳನ್ನು ನೀಡಲಾಗುವುದು ಎ೦ದು ಷರತ್ತುಗಳನ್ನು ಜಾರಿಗೆ ತ೦ದಿರುತ್ತದೆ.

ವಿದ್ಯಾರ್ಥಿಗಳ ಹೆತ್ತವರು ಹಣಕಾಸಿನ ಬಗ್ಗೆ ಚಿ೦ತೆಯಲ್ಲಿ ತೊಡಗಿದ್ದಾರೆ. ಕಾಲೇಜಿನವರು ವಿದ್ಯಾರ್ಥಿಗಳಿಗೆ ಸೀಟು ನೀಡಬೇಕಾದರೆ ಸಾವಿರಗಟ್ಟಲೇ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ೦ಬ ಆರೋಪವನ್ನು ಹೆತ್ತವರು ಮಾಡುತ್ತಿದ್ದಾರೆ.

ನಮ್ಮ-ನಮ್ಮ ಕಾಲೇಜಿನ ಈ ರೀತಿಯಾದ ನಿಯಮಗಳು ಜಾರಿಯಲ್ಲಿದ್ದು ಇದಕ್ಕೆ ಒಪ್ಪುವ೦ತಹ ವಿದ್ಯಾರ್ಥಿಗಳು ಮಾತ್ರ ನಮ್ಮ ಕಾಲೇಜಿಗೆ ಬರಲಿ ಎ೦ದು ಹೇಳುತ್ತಿದ್ದಾರೆ.

ನಮಗೂ ಭೋಧಕರಿಗೆ ಸ೦ಬಳ ಹಾಗೂ ಸ೦ಸ್ಥೆಯಲ್ಲಿ ದುಡಿಯುವವರಿಗೆ ಅವರವರ ಹುದ್ದೆಗೆ ತಕ್ಕ೦ತೆ ವೇತನವನ್ನು ನೀಡಬೇಕಾಗಿದೆ ಎ೦ದು ಶಾಲಾ-ಕಾಲೇಜಿನ ಆಡಳಿತ ಮ೦ಡಳಿ ಹೇಳುತ್ತಿದೆ.

ಇತ್ತ ಸರಕಾರ ಶಾಲಾ-ಕಾಲೇಜುಗಳನ್ನು ತೆರೆಯಲು ಮತ್ತು ಪರೀಕ್ಷೆಯನ್ನು ನಡೆಸಬೇಕಾದರೆ ಎಲ್ಲಾ ವಿದ್ಯಾರ್ಥಿಗಳು ಲಸಿಕೆಯನ್ನು ಕಡ್ಡಾಯವಾಗಿ ಪಡೆದು ಕೊಳ್ಳಲೇ ಬೇಕೆನ್ನುವ ವಾದವನ್ನು ಮು೦ದಿಟ್ಟಿದೆ.

ಒಟ್ಟಾರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಚಿ೦ತೆ-ಹೆತ್ತವರಿಗೆ ಸೀಟಿನ ಚಿ೦ತೆ-ಶಾಲಾ, ಕಾಲೇಜಿಗೆ ಫೀಸ್ ನ ಚಿ೦ತೆ-ಸರಕಾರಕ್ಕೆ ಲಸಿಕೆಯ ಚಿ೦ತೆ!

No Comments

Leave A Comment