Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಸಿಡಿ ಪ್ರಕರಣಕ್ಕೆ ಎಂಟ್ರಿಕೊಟ್ಟ ಪ್ರಸಿದ್ಧ ವಕೀಲೆ ಇಂದಿರಾ ಜೈಸಿಂಗ್‌ – ಯುವತಿ ಪರ ವಕಾಲತ್ತು

ಬೆಂಗಳೂರು, ಜೂ.21: ಮಾಜಿ ಸಚಿವ ರಮೇಶ್‌ ಜಾರಕೊಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿ ಪರ ಲಿಂಗ ಸಮಾನತೆ, ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುವಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಪದ್ಮಶ್ರೀ ಪುರಸ್ಕೃತ ವಕೀಲೆ ಇಂದಿರಾ ಜೈಸಿಂಗ್ ಕೋರ್ಟ್‌ನಲ್ಲಿ ಹಾಜರಾಗುವುದಾಗಿ ಹೇಳಿದ್ದು, “ನಾನು ಎಸ್‌ಐಟಿ ಪ್ರಕರಣವನ್ನು ಮುಚ್ಚಿಹಾಕಲು ಬಿಡುವುದಿಲ್ಲ” ಎಂದಿದ್ದಾರೆ.

ಎಸ್‌ಐಟಿ ಸ್ವತಂತ್ರವಾಗಿ ತನಿಖೆ ನಡೆಸುತ್ತಿಲ್ಲ. ಈ ಹಿನ್ನೆಲೆ ಹೈಕೋರ್ಟ್‌‌ ಮೇಲ್ವಿಚಾರಣೆಯಲ್ಲಿ ತನಿಖೆ ಕೈಗೊಳ್ಳಬೇಕು. ಸಿಬಿಐ ತನಿಖೆ ನಡೆಸಬೇಕು ಎಂದು ಈ ಹಿಂದೆ ಸಂತ್ರಸ್ತ ಯುವತಿ ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠದ ಮುಂದೆ ಸಲ್ಲಸಿರುವ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಬೇಕು ಎಂದು ಇಂದಿರ ಜೈಸಿಂಗ್‌‌ ಅರ್ಜಿದಾರರ ಪರ ಕೋರಿದ್ದಾರೆ.

ಅತ್ಯಾಚಾರ ಆರೋಪಿ ರಮೇಶ್‌‌ ಜಾರಕಿಹೊಳಿ ರಾಜೀನಾಮೆಗೆ ಕಾರಣವಾಗಿದ್ದ ಸಿಡಿ ಪ್ರಕರ ಇಂದಿರಾ ಜೈಸಿಂಗ್‌ ಅವರ ಆಗಮನದಿಂದ ಮತ್ತೆ ಹೊಸ ಆರಂಭ ಪಡೆಯಲಿದೆ ಎನ್ನಲಾಗುತ್ತಿದೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್‌‌ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ, ಪ್ರಕರಣವನ್ನು ಎಸ್‌ಐ ತನಿಖೆಗೆ ನೀಡಲಾಗಿತ್ತು. ಅತ್ಯಾಚಾರ ಪ್ರರಣ ದಾಖಲಾಗಿತ್ತಾದರೂ, ಆ ಸಿಡಿಯಲ್ಲಿರುವುದು ನಾನೇ ಎಂದು ಸ್ವತಃ ರಮೇಶ್‌ ಜಾರಕಿಹೊಳಿ ಅವರೇ ಒಪ್ಪಿಕೊಂಡಿದ್ದರೂ ಕೂಡಾ ಎಸ್‌ಐಟಿ ಅಧಿಕಾರಿಗಳು ರಮೇಶ್‌ ಜಾರಕಿಹೊಳಿ ಅವರನ್ನು ಇಲ್ಲಿಯವರೆಗೆ ಬಂಧಿಸಿಲ್ಲ. ಈ ಹಿನ್ನೆಲೆ ರಾಜ್ಯ ಸರ್ಕಾರ ಹಾಗೂ ಎಸ್‌ಐಟಿ ಸಿಡಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆಯೇ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

No Comments

Leave A Comment