Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಇ೦ತಹ ಎಡವಟ್ಟು ಕಾರ್ಯಕ್ರಮಗಳಿ೦ದಾಗಿ ಉಡುಪಿಯಲ್ಲಿ ಲಾಕ್ ಡೌನ್ ಮು೦ದುವರಿಕೆ-ನಗರಸಭೆಗಿಲ್ಲವೇ ಕೊವೀಡ್ ಮಾರ್ಗಸೂಚಿ?

ನೋಡಿ ದಿನಕ್ಕೆ ಒ೦ದೊ೦ದು ಕಾನೂನು ಜಾರಿಗೆ ಬರುತ್ತದೆ.ವಾರದಿ೦ದ ವಾರಕ್ಕೆ ರಾಜ್ಯಸರಕಾರ ಲಾಕ್ ಡೌನ್ ನನ್ನು ಮು೦ದುವರಿಸುತ್ತಲೇ ಇದೆ. ಜನರು ಸಿಟ್ಟಿನಿ೦ದ ಕುದಿಯುತ್ತಿದ್ದಾರೆ.

ತರಕಾರಿ ಮಾರುಕಟ್ಟೆಯಲ್ಲಿ ಕೊವೀಡ್ ನಿಯಮವನ್ನು ಪಾಲಿಸಿಲ್ಲ, ಅ೦ತರವನ್ನು ಪಾಲಿಸುತ್ತಿಲ್ಲ,ಮಾಸ್ಕ್ ಧರಿಸುತ್ತಿಲ್ಲವೆ೦ಬ ನಾನಾ ಕಾರಣಕ್ಕೆ ಉಡುಪಿ ನಗರಸಭೆಯ ಅಧಿಕಾರಿಗಳು, ತಹಶೀಲ್ದಾರ್, ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಿದೆ. ಅದರೆ ಇದರ ಮಧ್ಯೆ ಉಡುಪಿ ನಗರಸಭೆಯು ಮತ್ತೊ೦ದು ಎಡವಟ್ಟುಮಾಡುತ್ತಿರುವುದು ಜನ ಸಾಮಾನ್ಯರಲ್ಲಿ ಚರ್ಚೆಗೆ ಕಾರಣಮಾಡಿಕೊಟ್ಟಿದೆ.

ಲಾಕ್ ಡೌನ್ ಕಳೆದ ಹಲವು ದಿನಗಳಲ್ಲಿ ಮಾಡಲಾಗುತ್ತಿದೆಯಾದರೂ ಕೊವೀಡ್ ಸೋಕಿ೦ತರ ಸ೦ಖ್ಯೆ ಕಡಿಮೆಯಾಗದಿರುವುದಕ್ಕೆ ಇ೦ತಹ ಕಾರ್ಯಕ್ರಮಗಳೇ ಮುಖ್ಯವೆ೦ದು ಅನಿಸುವುದಿಲ್ಲವೇತಕೆ ಎ೦ಬುವುದು ಮಾತ್ರ ಅರ್ಥವಾಗುತ್ತಿಲ್ಲ.

ಮನೆ ವಿತರಣೆ-ಅಕ್ಕಿವಿತರಣೆ ಎ೦ದಕೂಡಲೇ ಜನಸ೦ಖ್ಯೆ ಸೇರುವುದು ಸ್ವಾಭಾವಿಕ.ಅದರೆ ಇ೦ತಹ ಕಾಕ್ರಮಗಳನ್ನು ಇ೦ತಹ ಲಾಕ್ ಡೌನ್ ಸಮಯದಲ್ಲಿ ಹಮ್ಮಿಕೊಳ್ಳುವ ಅಗತ್ಯವಾದರೂ ಏನು ಎ೦ಬುವುದು ಚರ್ಚೆಗೆ ಕಾರಣವಾಗಿದೆ.

ಒ೦ದು ಲೆಕ್ಕದಲ್ಲಿ ಸರಕಾರಿ ಇಲಾಖೆಯ ಖಜಾನೆ ಬರಿದಾಗಿರುವುದರಿ೦ದಾಗಿ ಇ೦ತಹ ಕಾರ್ಯಕ್ರಮ ನಡೆಸಿದರೆ ಮನೆಯನ್ನು ಪಡೆದು ಕೊಳ್ಳುವ ಫಲಾನುಭವಿಗಳಿ೦ದ ಹಣ ಸರಕಾರಿ ಇಲಾಖೆಗೆ ಬರುತ್ತದೆ.ಇದರಿ೦ದಾಗಿ ಆರ್ಥಿಕ ಸಮಸ್ಯೆಯನ್ನು ಸರಿದುಗಿಸಬಹುದೆ೦ಬ ಉದ್ದೇಶ ಇದರದಾಗಿದೆ ಎ೦ದು ಹೇಳಬೇಕಾಗುತ್ತದೆ.

ಅದರೆ ನಗರದಲ್ಲಿ ಚಪ್ಪಲಿ ಅ೦ಗಡಿ,ಬಟ್ಟೆಯ೦ಗಡಿ,ಚಿನ್ನದ೦ಗಡಿಗಳು ಸೇರಿದ೦ತೆ ಇತರ ಸಣ್ಣ-ಸಣ್ಣ ವ್ಯಾಪರಕ್ಕೆ ಇನ್ನೂ ಅವಕಾಶವನ್ನು ಮಾಡಿಕೊಡದ ಸರಕಾರ ಇ೦ತಹ ಸರಕಾರಿ ಕಾರ್ಯಕ್ರಮವನ್ನು ನಡೆಸಲು ಅನುಮತಿಯನ್ನು ನೀಡಿದೆಯಾ? ಎ೦ದು ಜನರು ಪ್ರಶ್ನಿಸುತ್ತಿದ್ದಾರೆ.

ಜನಪ್ರತಿನಿಧಿಗಳಿಗೊ೦ದು ಕಾನೂನು, ದಿನ ನಿತ್ಯವೂ ದುಡಿದು ತಿನ್ನುವ ಜನರಿಗೊ೦ದು ಕಾನೂನು ಸರಿಯೇ ಎ೦ದು ಕೇಳಿತ್ತಿದ್ದಾರೆ.
ಮನೆ ಹ೦ಚುವಾಗ ಜನಸ೦ದಣಿ ಸೇರದೇ ಈ ಕಾರ್ಯಕ್ರಮವ೦ತೂ ನಡೆಸಲು ಸಾಧ್ಯವೇ ಇಲ್ಲ. ಇ೦ತಹ ಸಮಯದಲ್ಲಿ ಈ ಕಾರ್ಯಕ್ರಮ ನಡೆಸುವುದು ಎಷ್ಟು ಸಮ೦ಜಸವೆ೦ದು ನಗರಸಭೆ, ಜಿಲ್ಲಾಡಳಿತ ಗಮನಹರಿಸ ಬೇಕಾಗಿದೆ. ಈಗ ಯಾರಿಗೆ ದ೦ಡವಿಧಿಸಬೇಕು ?

ಮನೆಯನ್ನು ಪಡೆದುಕೊ೦ಡವರು ಯಾವಾಗ ಗೃಹಪ್ರವೇಶ ನಡೆಸಬೇಕೆನ್ನುವುದಕ್ಕೆ ಮು೦ದಾಗಿ ಮತ್ತೆ ಲಾಕ್ ಡೌನ್ ಮು೦ದುವರಿಯುವುದರಲ್ಲಿ ಎರಡುಮಾತಿಲ್ಲ. ಬುದ್ಧಿವ೦ತರ ಜಿಲ್ಲೆಯಲ್ಲೇ ಇದೀಗ ಬುದ್ಧಿ ಇಲದವರ೦ತೆ ನಡುಕೊಳ್ಳುತ್ತಿರುವುದು ತೀವ್ರ ವಿಷಾದನೀಯ.

ಜನ ಸೇರಬಾರದು, ಸಭೆ ಸಮಾರ೦ಭ ನಡೆಸಬಾರದು ಎ೦ದು ಸರಕಾರವೇ ಹೇಳುತ್ತಿರುವಾಗ ಇದು ಹೇಗೆ ನಡೆಯುತ್ತದೆ?

No Comments

Leave A Comment