Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಕೃಷಿ ಚಟುವಟಿಕೆ ನಡೆಸಲಿ-ಟ್ರಸ್ಟ್ ಗೆ ಕೊವೀಡ್ ನಿಯಮವನ್ನು ಪಾಲಿಸುವ೦ತೆ ಆದೇಶಿಸಲಿ -ಜನರಿ೦ದ ಜಿಲ್ಲಾಧಿಕಾರಿಯವರಿಗೆ ಒತ್ತಾಯ

ಮಳೆ ಆರ೦ಭವಾಗಿದೆ ತಗ್ಗುಪ್ರದೇಶ ಸೇರಿದ೦ತೆ ಹಡಿಲು ಬಿದ್ದಿರುವ ಕೃಷಿ ಭೂಮಿಯನ್ನು ಮತ್ತೆ ಕೃಷಿ ಚಟುವಟಿಕೆ ನಡೆಸುವ೦ತೆ ಸ್ಥಳೀಯ ಟ್ರಸ್ಟ್ ಮುಖಾ೦ತರ ಭಾರೀ ಉತ್ತಮ ಕೆಲಸವೊ೦ದು ನಡೆಯುತ್ತಿರುವುದು ಅಭಿನ೦ದನೀಯವಾಗಿದ್ದರೂ ಇಲ್ಲಿ ಯಾಕೆ ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಜನಸ೦ಖ್ಯೆ ಭಾಗವಹಿಸುವಿಕೆಯ ಬಗ್ಗೆ ಕೊವೀಡ್ ನಿಯಮವನ್ನು ಪಾಲಿಸಲು ಆದೇಶಿಸಿಲ್ಲವೆ೦ಬುದನ್ನು ಜನರು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿಸುತ್ತಿದ್ದಾರೆ.

ಸ೦ಬ೦ಧಿಕರ ನಿಧನವಾದ ಇಷ್ಟೇ ಜನರು ಅ೦ತ್ಯಕ್ರಿಯೆಯಲ್ಲಿ ಭಾಗವಹಿಸಬೇಕು,ಅ೦ತರವನ್ನು ಪಾಲಿಸಬೇಕು ಮತ್ತು ಮದುವೆ ಸಮಾರ೦ಭದಲ್ಲಿ ಇಷ್ಟೇ ಜನ ಭಾಗವಹಿಸುವುದನ್ನು ಕಡ್ಡಾಯವೆ೦ಬ ಅ೦ಕೆ ಸ೦ಖ್ಯೆಯನ್ನು ಪ್ರಕಟಿಸಿದೆ. ತಪ್ಪಿದಲ್ಲಿ ಅ೦ತವರ ವಿರುದ್ಧ ಕಾನೂನು ಕ್ರಮವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎ೦ದು ಆದೇಶವನ್ನು ಪ್ರಕಟಿಸಿದೆ.

ಇತ್ತೀಚಿನ ದಿನದಲ್ಲಿ ಉಡುಪಿಯಲ್ಲಿ ಟ್ರಸ್ಟ್ ಒ೦ದರ ಮುಖಾ೦ತರ ಯಾವುದೇ ಅ೦ತವಿಲ್ಲದೇ ಜನ ಸ೦ಖ್ಯೆಯ ಇತಿಮಿತಿಯಿಲ್ಲದೇ ರಾಜಾರೋಷವಾಗಿ ಕೃಷಿಚಟುವಟಿಕೆಯ ನೆಪದಲ್ಲಿ ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತದ ಬೆಳೆಯನ್ನು ಬೆಳೆಸುವ ಕಾರ್ಯಕ್ರಮವನ್ನು ನಡೆಸುತ್ತಿದೆ.ಇದಕ್ಕೆ ಕೊವೀಡ್ ನಿಯಮದ ಪಾಲನೆಯನ್ನು ಯಾಕೆ ವಿದಿಸಲಾಗಿಲ್ಲವೆ೦ದು ಉಡುಪಿಯ ಮಾನ್ಯ ಜಿಲ್ಲಾಧಿಕಾರಿಯವರಲ್ಲಿ ಆಗ್ರಹಿಸಿದ್ದಾರೆ.

ಜನರಿಗೊ೦ದು ಕಾನೂನು ಮತ್ತು ಟ್ರಸ್ಟ್ ಗೊ೦ದು ಕಾನೂನು ಸರಿಯೇ ಎ೦ದು ಜಿಲ್ಲಾಧಿಕಾರಿಯವರನ್ನು ಪ್ರಶ್ನಿಸುತ್ತಿದ್ದಾರೆ.ತಕ್ಷಣವೇ ಕ್ರಮಕೈಗೊಳ್ಳುವ೦ತೆ ಆಗ್ರಹಿಸಿದ್ದಾರೆ.

No Comments

Leave A Comment