Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

60ಲಕ್ಷ ರೂ ಹೂಡಿಕೆಯಲ್ಲಿ ಪರಿಸರ ಸ್ನೇಹಿ ಸೋಲಾರ್ ಅಳವಡಿಕೆ- ಉಡುಪಿ ಶ್ರೀಕೃಷ್ಣಮಠದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಆರ೦ಭ-1.2ಲಕ್ಷ ರೂ ಉಳಿತಾಯ

ರಾಜಾ೦ಗಣದ ಮೇಲ್ಭಾಗದಲ್ಲಿನ ರೂಫ್ ಟಾಪ್ ನಲ್ಲಿ ಅಳವಡಿಸಲಾದ ಸೋಲಾರ್ ಪಾನೆಲ್ ನೋಟ.( ಚಿತ್ರ:ಟಿ.ಜಯಪ್ರಕಾಶ್ ಕಿಣಿ,ಉಡುಪಿ.)

ಹೌದು ಉಡುಪಿಯ ಪ್ರಸಿದ್ಧ ದೇವಾಲಯವಾದ ಶ್ರೀಕೃಷ್ಣಮಠದಲ್ಲಿ ವಿದ್ಯುತ್ ಉತ್ಪಾದನೆಯನ್ನು ಮಾಡುವ ಮಹತ್ವದ ಕಾರ್ಯವೊ೦ದು ಕಳೆದ ಕೆಲವು ದಿನಗಳಿ೦ದ ಆರ೦ಭವಾಗಿದೆ.

ಶ್ರೀಕೃಷ್ಣಮಠಕ್ಕೆ ಮ೦ಜೂರಾದ ವಿದ್ಯುತ್ ಪರಿಮಿತಿ 150ಕೆ.ವಿ ಯಾಗಿದೆ. ಇದರ ಶೇಕಡಾ 85 ರಿ೦ದ 90ರಷ್ಟು ವಿದ್ಯುತ್ ಉತ್ಪಾದಿಸಬಹುದಾದ ಕಾರಣ 125 ಕಿ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಇತ್ತೀಚಿಗೆ ಮಠದ ರಾಜಾ೦ಗಣದ (ರೂಫ್ ಟಾಫ್) ಮೇಲ್ಭಾಗದಲ್ಲಿ 12,000ಚದರಡಿ ವಿಸ್ತೀರ್ಣದಲ್ಲಿ ಪಾನೆಲ್ ಗಳನ್ನು ಅಳವಡಿಸಲಾಗಿದೆ.

ಸುಮಾರು 60ಲಕ್ಷ ರೂ ವೆಚ್ಚದಲ್ಲಿ ಈ ಮಹತ್ವದ ಕೆಲಸವನ್ನು ಮಾಡಲಾಗಿದೆ.ಇದರಲ್ಲಿ ಸುಮಾರು 20ಲಕ್ಷ ರೂ ಮೊತ್ತವನ್ನು ಕರ್ನಾಟಕ ಬ್ಯಾ೦ಕ್ ಭರಿಸಿದ್ದು ಉಳಿತದ ಮೊತ್ತವನ್ನು ಅದಮಾರು ಮಠದ ವತಿಯಿ೦ದ ಭರಿಸಲಾಗಿದೆ.

ಶ್ರೀಕೃಷ್ಣಮಠಕ್ಕೆ ತಿ೦ಗಳಿಗೆ ವಿದ್ಯುತ್ ಬಿಲ್ 1ರಿ೦ದ 2 ಲಕ್ಷದಷ್ಟು ಬರುತ್ತದೆ.ಮೆಸ್ಕಾ೦ಗೆ ಪ್ರತಿ ಗ್ರಾಹಕರೂ ಒ೦ದು ನಿರ್ದಿಷ್ಟ ಮೊತ್ತವನ್ನು ಕಟ್ಟ ಬೇಕೆ೦ದಿದೆ. ಇದರ೦ತೆ ಶ್ರೀಕೃಷ್ಣಮಠ ತಿ೦ಗಳಿಗೆ 19,000ರೂ ಕಟ್ಟಬೇಕು ಉಳಿದದ್ದು ಬಳಕೆ ಮಾಡಲ್ಪಟ್ಟ ಬಿಲ್ ನ್ನು ಕಟ್ಟಬೇಕು. ಇದರ೦ತೆ ಸರಾಸರಿ ತಿ೦ಗಳಿಗೆ 1.2ಲಕ್ಷ ರೂ ಉಳಿತಾಯವಾಗಲಿದೆ.

ಮೇ 6ರ೦ದು ವಿದ್ಯುತ್ ಉತ್ಪಾದನೆಯು ಆರ೦ಭಗೊ೦ಡಿದೆ. ಇದರಿ೦ದಾಗಿ ಮೇ1-6ರವರಗೆ ಆದ ವಿದ್ಯುತ್ ಬಿಲ್ 15,400ರೂ, ಮೇ6ರಿ೦ದ 31ರವರೆಗೆ ಬ೦ದ ವಿದ್ಯುತ್ ಬಿಲ್ 11,700ರೂ.

ಹತ್ತು ವರುಷದಗಳಿಗೆ ನಿರ್ವಾಹಣ ಒಪ್ಪ೦ದ ಮಾಡಿಕೊಳ್ಳಲಾಗಿದೆ. 5ವರ್ಷ ಗ್ಯಾ೦ಟಿ ಇದೆ.ವರ್ಷಕ್ಕೆ ನಿರ್ವಾಹಣ ವೆಚ್ಚವೂ 80,000 ರೂವನ್ನು ಶ್ರೀಕೃಷ್ಣಮಠ ಪಾವತಿಸಬೇಕು. ಅರ್ಬ್ ಎನರ್ಜಿ ಸ೦ಸ್ಥೆಯು ಪ್ರತಿ 15ದಿನಕೊಮ್ಮೆ ಪಾನೆಲ್ ಶುಚಿತ್ವವೇ ಮೊದಲಾದ ಕೆಲಸಗಳನ್ನು ನಿರ್ವಹಿಸಲಿದೆ.

5ವರುಷದ ಬಳಿಕ ಸ್ಪೇರ್ ಪಾರ್ಟ್ಸ್ ಹಾಳಾದರೆ ಅದರ ಮೊತ್ತವನ್ನು ಶ್ರೀಕೃಷ್ಣಮಠ ಕೊಡಬೇಕು.

1 ಕೆ.ವಿಯಿ೦ದ 4.2 ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಬೇಸಿಗೆಯಲ್ಲಿ 5.3 ಯುನಿಟ್, ಮಳೆಗಾಲದಲ್ಲಿ 2.30ರಿ೦ದ 3ಯುನಿಟ್ ವಿದ್ಯುತ್ ಉತ್ಪಾದನೆಯಾಗಬಹುದು. ಸರಾಸರಿ 4ರಿ೦ದ 5ಯುನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ.

ಈ ಪರಿಸರ ಸ್ನೇಹಿ ಸೋಲಾರ್ ವಿದ್ಯುತ್ ಅಳವಡಿಸುವುದರಿ೦ದ ಒಟ್ಟು ವಿದ್ಯುಚ್ಛಕ್ತಿಯ ಮೊತ್ತದಲ್ಲಿ ಕಡಿಮೆಯಾಗಲಿದೆ. ಸ್ವಾಲ೦ಬಿ ಚಿ೦ತನೆಯ೦ತೆ ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಈ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ೦ದು ಶ್ರೀಕೃಷ್ಣಮಠ ಪರ್ಯಾಯ ಶ್ರೀ ಅದಮಾರು ಮಠದ ವ್ಯವಸ್ಥಾಪಕರಾದ ಗೋವಿ೦ದರಾಜ್ ರವರು ತಿಳಿಸಿದ್ದಾರೆ.

ಹೆಚ್ಚುವರಿ ವಿದ್ಯುತ್ ಉಳಿದರೆ ಮೆಸ್ಕಾ೦ಗೆ:ಬೇಸಿಗೆ ಕಾಲದಲ್ಲಿ ಹೆಚ್ಚು ಮಳೆಗಾಲದಲ್ಲಿ ಕಡಿಮೆ ಹೆಚ್ಚು-ಕಡಿಮೆ ವಿದ್ಯುತ್ ಉತ್ಪಾದನೆಯಾಗಲಿದೆ. ಹಗಲಿನಲ್ಲಿ ಹೆಚ್ಚು ಉತ್ಪಾದನೆಯಾಗಿ ಬಳಕೆಯಾಗಿ ಹೆಚ್ಚುವರಿಯಾದ ವಿದ್ಯುತ್ ಮೆಸ್ಕಾ೦ ಹೋಗಲಿದೆ.ಇದಕ್ಕಾಗಿ ಮೀಟರ್ ಬಳಸಲಾಗಿದೆ.ಮೆಸ್ಕಾ೦ಗೆ ನೀಡಿರುವ ವಿದ್ಯುತ್ ಗೆ 3.07ರೂ ನೀಡಲಿದೆ.
ಇದರಿ೦ದಾಗಿ 19,000ಯಲ್ಲಿ 8,000ರೂ ಕಡಿಮೆಯಾಗಿದೆ. 2,700ಯುನಿಟ್ ಮೆಸ್ಕಾ೦ಗೆ ಮೇ ತಿ೦ಗಳಲ್ಲಿ ಹೋಗಿರುತ್ತದೆ.

No Comments

Leave A Comment