Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಜೂನ್ 21 ರಿಂದ ಅನ್​ಲಾಕ್ 2.O ಜಾರಿಗೆ ಗ್ರಿನ್ ಸಿಗ್ನಲ್ ನೀಡಿದ ತಾಂತ್ರಿಕ ಸಲಹಾ ಸಮಿತಿ: ಏನಿರುತ್ತೆ, ಏನಿರುವುದಿಲ್ಲ? ಇಲ್ಲಿದೆ ವಿವರ

ಬೆಂಗಳೂರು: ಕೊರೊನಾ ಸೋಂಕನ್ನು ನಿಯಂತ್ರಿಸಲು ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ಸಲಹೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಎರಡನೆಯ ಅಲೆಯ ವೇಳೆ ಇಡೀ ರಾಜ್ಯದಲ್ಲಿ ಲಾಕ್​ಡೌನ್​ ಘೋಷಿಸಿತ್ತು. ಅದೀಗ ಹಂತಹಂತವಾಗಿ ಅನ್​ಲಾಕ್​ ಆಗುತ್ತಿದೆ. ಜೂನ್ 21 ರಿಂದ ಅನ್​ಲಾಕ್ 2.O ಜಾರಿಗೆ ತಾಂತ್ರಿಕ ಸಲಹಾ ಸಮಿತಿ ಇದೀಗ ಗ್ರಿನ್ ಸಿಗ್ನಲ್ ನೀಡಿದೆ. ಹಾಗಾಗಿ ರಾಜ್ಯದಲ್ಲಿ ಜೂನ್ 21 ರಿಂದ ಏನೆಲ್ಲಾ ಮುಕ್ತವಾಗಿ ಇರುತ್ತೆ, ಯಾವುದಕ್ಕೆಲ್ಲ ನಿರ್ಬಂಧವಿರುತ್ತದೆ ಎಂಬುದರ ವಿವರ ಮಾಹಿತಿ ಇಲ್ಲಿದೆ:

ಕರ್ನಾಟಕದಲ್ಲಿ ಎರಡನೇ ಹಂತದ ಅನ್​ಲಾಕ್​ಗೆ ಇದೀಗ ದಿನಾಂಕ ನಿಗದಿಯಾಗಿದ್ದು, ಜೂನ್ 21 ರಿಂದ ಅನ್​ಲಾಕ್ 2.O ಜಾರಿಗೆ ಬರುತ್ತದೆ. ಜೂನ್ 21 ರಿಂದ ಮಾಲ್, ಹೋಟೆಲ್, ಚಿಕ್ಕ‌ಚಿಕ್ಕ ಮಾರುಕಟ್ಟೆ, ಹೇರ್​ ಕಟ್​ ಶಾಪ್, ಮದುವೆ ಸಮಾರಂಭಕ್ಕೆ 50 ಜನರಿಗೆ ಅವಕಾಶ ನೀಡಿ ಮುಕ್ತಗೊಳಿಸಲಾಗುವುದು.

ಬಟ್ಟೆ ಅಂಗಡಿ, ಚಿನ್ನದಂಗಡಿ ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ಮಳಿಗೆಗಳು ಸಹ ಜೂನ್ 21 ರಿಂದ ಓಪನ್ ಆಗಲಿವೆ. ದಿನಕ್ಕೆ ಎಂಟು ಗಂಟೆಗಳ ಕಾಲ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಲಾಗುವುದು. ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಪ್ರವೇಶ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಅನ್‌ಲಾಕ್ 2.O ಜಾರಿಯಾಗುವ ಹಿನ್ನೆಲೆಯಲ್ಲಿ ಜೂ.21ರಿಂದ ಕರ್ನಾಟಕದಲ್ಲಿ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಶೇ.50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರವಾಗುವ ಸಾಧ್ಯತೆ ಇದೆ.

ಈ ಕೆಳಗಿನ ವಹಿವಾಟು ನಡೆಸಲು ಮೂರನೇ ಹಂತದ ಅನ್​ಲಾಕ್ ವರೆಗೂ ಕಾಯಬೇಕು

ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಸಹ ಓಪನ್ ಮಾಡಲು ತಾಂತ್ರಿಕ ಸಲಹಾ ಸಮಿತಿಯಿಂದ‌ ಗ್ರಿನ್ ಸಿಗ್ನಲ್ ದೊರೆತಿದೆ. ಆದರೆ ಥಿಯೇಟರ್, ಪಬ್, ಬಾರ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣಗಳು ಯಥಾಸ್ಥಿತಿ ಕ್ಲೋಸ್ ಆಗಿರಲಿವೆ. ಇವುಗಳನ್ನೆಲ್ಲ ಓಪನ್‌ ಮಾಡಲು ಮೂರನೇ ಹಂತದ ಅನ್​ಲಾಕ್ ವರೆಗೂ ಕಾಯಲು ತೀರ್ಮಾನ ಮಾಡಲಾಗಿದೆ.

No Comments

Leave A Comment