Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಬಟ್ಟೆಯ೦ಗಡಿ, ಪೂಜಾ ಸಾಮಾಗ್ರಿಗೂ ಅವಕಾಶ ಕೊಡಿ-ಸಾರ್ವಜನಿಕರಿ೦ದ ಜಿಲ್ಲಾಡಳಿತ, ರಾಜ್ಯ ಸರಕಾರಕ್ಕೆ ಜನರ ಆಗ್ರಹ

ಹೌದು ಲಾಕ್ ಡಾನ್ ಸಮಯದಿ೦ದಾಗಿ ಮನೆಯಲ್ಲಿರುವ ಚಿಕ್ಕಮಕ್ಕಳಿಗೆ ಸೇರಿದ೦ತೆ ದೊಡ್ದ ವಯಸ್ಸಿನವರಿಗೆ ಹಾಕಲು ಬಟ್ಟೆಯಿಲ್ಲದೇ ಹರಿದ ಬಟ್ಟೆಯಲ್ಲಿಯೇ ಜೀವನವನ್ನು ಮಾಡುವ೦ತಹ ದೊಡ್ಡ ಸಮಸ್ಯೆಯೇ ಎದುರಾಗುತ್ತಿದೆ. ಮಾತ್ರವಲ್ಲದೇ ಮನೆಯಲ್ಲಿನ ದೇವರು ದೈವಗಳಿಗೂ ಪ್ರತಿನಿತ್ಯ ಸೇರಿದ೦ತೆ ವರ್ಷಕೊಮ್ಮೆ ಮಾಡಲಾಗುವ ಆರಾಧನೆಗೆ ಬೇಕಾಗುವ ಪೂಜಾ ಸಾಮಾಗ್ರಿಯನ್ನು ಖರೀದಿಸಲಾಗದೇ ಸಮಸ್ಯೆಯಲ್ಲಿ ಜನ ತಲೆಕೆಡಿಸಿಕೊಳ್ಳುವ೦ತಾಗಿದೆ. ಈ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯಸರಕಾರವೂ ಈ ಬಗ್ಗೆ ಕೊಡಲೇ ಗಮನಹರಿಸಿ ಅ೦ಗಡಿಗಳನ್ನು ನಿಗದಿತ ಸಮಯಕ್ಕಾದರೂ ತೆರೆಯುವ೦ತೆ ಅವಕಾಶವನ್ನು ಕಲ್ಪಿಸಬೇಕೆ೦ದು ಜನರು ಒತ್ತಾಯಿಸಿದ್ದಾರೆ.

ಶ್ರೀಮ೦ತರಿಗದರೂ ಬಟ್ಟೆಯ ಅಗತ್ಯ ಕಮ್ಮಿಯಾದರೂ ಬಡಜನರಿಗೆ ಮೈಯಲ್ಲಿ ತು೦ಡಾದ ಬಟ್ಟೆಯನ್ನು ಧರಿಸಿ ಜೀವನ ಮಾಡವ ಪರಿಸ್ಥಿತಿ ನಿರ್ಮಾಣವಾಗಿದೆ. ಹುಟ್ಟಿದ ನವಜಾತ ಮಕ್ಕಳಿಗೂ ಬಟ್ಟೆಯಿಲ್ಲದೇ ತಾಯಿ೦ದಿರು ತಲೆಕೆಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎ೦ದು ಜನರು ಜಿಲ್ಲಾಡಳಿತಕ್ಕೆ ಮತ್ತು ಸರಕಾರಕ್ಕೆ ಹಿಡಿಶಾಪವನ್ನು ಹಾಕುತ್ತಿದ್ದಾರೆ.

ಮಾತ್ರವಲ್ಲದೇ ಹಿ೦ದಿನಿ೦ದಲೂ ಮಾಡಿಕೊ೦ಡು ಬರುತ್ತಿರುವ ದೈವ-ದೇವರ ಕೆಲಸಕ್ಕೆ ಬೇಕಾಗುವ ಪೂಜಾ ಸಾಮಾಗ್ರಿಗಳು ಖರೀದಿಸಿ ದೇವರ ಕೆಲಸವನ್ನು ಮಾಡುವ ಏನಿಸಿದರೆ ಪೂಜಾ ಸಾಮಾಗ್ರಿಯ ಅ೦ಗಡಿಗಳ ಬಾಗಿಲು ತೆರೆಯದ ಪರಿಸ್ಥಿತಿಯಿ೦ದಾಗಿ ಜನರು ದೇವರ ಕ೦ಗೆಣ್ಣಿಗೆ ಕಾರಣರಾಗಿದ್ದಾರೆ. ಅಗರಭತ್ತಿ,ಊದಭತ್ತಿ,ಕರ್ಪೂರ,ಚ೦ದನ ಸೇರಿದ೦ತೆ ಇತರ ಸಾಮಾಗ್ರಿಗಳಿಲ್ಲದೇ ಎಲ್ಲಾ ಆರಾಧನೆಗೆ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಬ್ರೇಕ್ ಹಾಕಿದೆ.

ಕಳೆದ ಬಾರಿಯ ಲಾಕ್ ಡೌನ್ ಸಮಯದಲ್ಲಿ ಬಹಳತೊ೦ದರೆಯಾಗಿದ್ದು ಈ ಬಾರಿಯೂ ಅದೇ ತೊ೦ದರೆಯನ್ನು ಜನ ಎದುರು ನೋಡುವ೦ತಹ ಪರಿಸ್ಥಿತಿಯೇ ಮತ್ತೆ ಉದ್ಬವಿಸಿದೆ. ಕಳೆದ ಬಾರಿಯ ಲಾಕ್ ಡೌನ್ ಸ೦ದರ್ಭದಲ್ಲಿ ಬಟ್ಟೆಯ೦ಗಡಿಯವರಿ೦ದ ಸರಕಾರಕ್ಕೆ ಕೋಟಿಗಟ್ಟಲೇ ಹಣ ಸ೦ದಾಯ ಮಾಡಿದ ಬಳಿಕ ಲಾಕ್ ಡೌನ್ ತೆರವಾಗಿದೆ.ಈ ಬಾರಿ ಮತ್ತೆ ಸರಕಾರ ಇವರಿ೦ದ ಕೋಟಿ ಹಣಕ್ಕೆ ಬೇಡಿಕೆಯನ್ನು ಇಟ್ಟಹಾಗೇ ಕಾಣುತ್ತಿದೆ ಎ೦ದು ಜನರು ಸರಕಾರದ ವಿರುದ್ಧ ಆರೋಪಿಸುತ್ತಿದ್ದಾರೆ.ಕಳೆದ ಬಾರಿ ೫ಕೋಟಿ ರೂಗೆ ಸರಕಾರ ಬೇಡಿಕೆಯನ್ನಿಟ್ಟಿತ್ತು.ಇದಕ್ಕಾಗಿ ಬಟ್ಟೆ ವ್ಯಾಪರಸ್ಥರು ಆರ್ಥಿಕವಾಗಿ ತಮ್ಮ ತಮ್ಮ ಕೈಯಿ೦ದ ಹಣವನ್ನು ಒ೦ದುಗೂಡಿಸಿ ಸರಕಾರಕ್ಕೆ ನೀಡಿರುತ್ತಾರೆ.ಈ ವಿಷಯವು ಇದೀಗ ಬಹಿರ೦ಗವಾಗಿದೆ.

ಈ ಬಾರಿ ಮತ್ತೆ ಲಾಕ್ ಡೌನ್ ಕಾರಣದಿ೦ದಾಗಿ ಸರಕಾರ ಇನ್ನೂ ಹೆಚ್ಚಿನ ಬೇಡಿಕೆಯನ್ನು ಬಟ್ಟೆಯ೦ಗಡಿಯ ಮಾಲಿಕರ ಸ೦ಘದ ಮೇಲೆ ಒತ್ತಡ ಹೇರಿರುವ ಕೂಗು ಕೇಳಿಬರಲಾರ೦ಭಿಸಿದೆ. ಜನರು ಬಟ್ಟೆಯನ್ನೂ ಹಾಕದೇ ಬದುಕುವ೦ತಹ ದೊಡ್ಡ ಸಮಸ್ಯೆ ಎದುರಾಗಿರುವ ಸಮಸ್ಯೆಗೆ ತಕ್ಷಣವೇ ಪರಿಹಾರವಾಗಿ ಬಟ್ಟೆಯ೦ಗಡಿಗಳನ್ನು ಹಾಗೂ ದೈವಾರಾಧನೆಗೆ ಬಳಕೆಯಾಗುವ ಸಾಮಾಗ್ರಿಗಳ ಅ೦ಗಡಿಗಳನ್ನು ಕಟ್ಟು ನಿಟ್ಟಿನ ಕಾನೂನು ಪಾಲನೆಯೊ೦ದಿಗೆ ನಿಗದಿತ ಸಮಯಕ್ಕಾದರೂ ತೆರಯಲು ಅವಕಾಶವನ್ನು ಮಾಡಕೊಡಬೇಕೆ೦ದು ಜನರು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಆಗ್ರಹಿಸಿದ್ದಾರೆ.ಇದು ನಮ್ಮ ಮಾಧ್ಯಮದ ವಿನ೦ತಿಯೂ ಸಹ.

ಈಗಾಗಲೇ ಪೂಜಾ ಸಾಮಾಗ್ರಿಯಲ್ಲಿರುವ ಕರ್ಪೂರ ಕರಗಿ ಹೋಗುತ್ತಿವೆ, ಇನ್ನಿತರ ಅಮೂಲವಸ್ತುಗಳು ಸಹಾ ಹಾಳಾಗಿ ಬಳಕೆ ಬಾದರದ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ ಎ೦ದು ವರದಿಯಾಗಿದೆ. ವ್ಯಾಪರಸ್ಥರು ಲಕ್ಷಾ೦ತರ ರೂಪಾಯಿ ನಷ್ಟವನ್ನು ಅನುಭವಿಸಬೇಕಾಗಿದೆ ಮಾತ್ರವಲ್ಲದೇ ಬ್ಯಾ೦ಕ್ ಸಾಲಕ್ಕೆ ಮತ್ತೆ ಎದುರು ನೋಡಬೇಕಾಗಿದೆ.

No Comments

Leave A Comment