Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಚೀನಾದಲ್ಲಿ ಅನಿಲ ಸ್ಫೋಟ: 11 ಸಾವು, 37 ಜನರಿಗೆ ಗಾಯ

ಬೀಜಿಂಗ್:  ಮಧ್ಯ ಚೀನಾದ ಹುಬೈ ಪ್ರಾಂತ್ಯದಲ್ಲಿ ಭಾನುವಾರ ಸಂಭವಿಸಿದ ಭಾರಿ ಅನಿಲ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಮತ್ತು 37 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮಾಧ್ಯಮ ವರದಿ ಮಾಡಿದೆ.

ಶಿಯಾನ್ ಜಿಲ್ಲೆಯ ಶಿಯಾನ್ ತರಕಾರಿ ಮಾರುಕಟ್ಟೆ ಬಳಿ ಸ್ಥಳೀಯ ಕಾಲಮಾನ 6.30 ವೇಳೆಗೆ ಸ್ಫೋಟ ಸಂಭವಿಸಿದ್ದು, ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸಿಜಿಟಿನ್ ಟಿವಿ ವರದಿ ಮಾಡಿದೆ.

ಅನೇಕ ನಿವಾಸಿಗಳು ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸುತ್ತಿದ್ದಾಗ, ಕೆಲವರು ಉಪಹಾರ ಸೇವಿಸುತ್ತಿದ್ದಾಗ ಶಿಯಾನ್‌ ನ ಯಾನ್ಹು ಮಾರುಕಟ್ಟೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಘಟನೆ ನಂತರ ಅನೇಕ ಮಂದಿ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ನಗರದ ಮುನ್ಸಿಪಲ್ ಅಧಿಕಾರಿಗಳು ಹೇಳಿದ್ದಾರೆ. ಕಟ್ಟಡ ಅವಶೇಷಗಳನ್ನು ತೆರವುಗೊಳಿಸುವಲ್ಲಿ ರಕ್ಷಣಾ ಸಿಬ್ಬಂದಿಗಳು ಮುಂದಾಗಿರುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಹಲವು ಫೋಟೋಗಳಿಂದ ತಿಳಿದುಬಂದಿದೆ.  ಘಟನೆ ಬಗ್ಗೆ ತನಿಖೆ ಮುಂದುವರೆದಿದೆ.

No Comments

Leave A Comment