Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಬೆಳ್ತಂಗಡಿ: ಬೈಕ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ

ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ಪಿಲ್ಯ ಗ್ರಾಮದಲ್ಲಿ ದ್ವಿಚಕ್ರ ವಾಹನವೊಂದರಲ್ಲಿಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ಅಬಕಾರಿ ಇಲಾಖೆಯ ಸಿಬ್ಬಂದಿ ದಾಳಿ ಮಾಡಿರುವ ಘಟನೆ ನಡೆದಿದೆ.

ದಾಳಿಯ ವೇಳೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಬೈಕ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವಿವಿಧ ಬ್ರ್ಯಾಂಡ್ ನ 15 ಸಾವಿರ ಲೀಟರ್ ಮದ್ಯ ಹಾಗೂ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 46,000 ರೂಪಾಯಿ ಮೌಲ್ಯದ ಸೊತ್ತು ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಅಕ್ರಮ ಮದ್ಯವನ್ನು ಬೇರೆಯವರಿಗೆ ಮಾರಲು ಕೊಂಡೊಯ್ಯುತ್ತಿದ್ದ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಎನ್, ಮುಖ್ಯ ಪೇದೆ ಸಯ್ಯದ್ ಶಬೀರ್ ಹಾಗೂ ಅಬಕಾರಿ ಪೇದೆಗಳಾದ ಭೋಜ.ಕೆ , ಶಿವಶಂಕ್ರಪ್ಪ, ರವಿಚಂದ್ರ ಬೂದಿಹಾಳ ಮತ್ತು ವಾಹನ ಚಾಲಕ ನವೀನ್ ಕುಮಾರ್ ಪಿ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

No Comments

Leave A Comment