Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

‘ಊರು-ಕೇರಿ’ ಬಿಟ್ಟು ತೆರಳಿದ ಡಾ. ಸಿದ್ದಲಿಂಗಯ್ಯ: ಬೆಂಗಳೂರಿನ ಕಲಾಗ್ರಾಮದಲ್ಲಿ ಬೌದ್ಧ ಸಂಪ್ರದಾಯದಂತೆ ಅಂತ್ಯಕ್ರಿಯೆ

ಬೆಂಗಳೂರು: ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗದೆ ನಿಧನರಾದ ದಲಿತ ಸಾಹಿತಿ, ಕವಿ ಡಾ ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆ ಬೌದ್ಧ ಧರ್ಮದ ಸಂಪ್ರದಾಯದಂತೆ ಬೆಂಗಳೂರಿನ ಕಲಾ ಗ್ರಾಮದಲ್ಲಿ ನೆರವೇರಿತು.

ಕಲಾಗ್ರಾಮದಲ್ಲಿ ಡಾ ಯು ಆರ್ ಅನಂತ ಮೂರ್ತಿಯವರ ಸಮಾಧಿ ಪಕ್ಕ ಡಾ ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಕೋವಿಡ್-19 ನಿರ್ಬಂಧಗಳ ನಡುವೆ ಕುಟುಂಬಸ್ಥರು, ಸಮೀಪದ ಬಂಧುಗಳು, ಗಣ್ಯರು ಅಂತ್ಯಕ್ರಿಯೆ ವೇಳೆ ಹಾಜರಿದ್ದರು.

ಸಮಾಜದಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ್ದ, 21ನೇ ವಯಸ್ಸಿನಲ್ಲಿಯೇ ಕವನಗಳನ್ನು ಬರೆದು, ಶೋಷಿತ ಸಮುದಾಯದ ಧ್ವನಿಯಾಗಿದ್ದ ಡಾ ಸಿದ್ದಲಿಂಗಯ್ಯನವರನ್ನು ಅನುಸರಿಸಿದವರು ಅದೆಷ್ಟೋ ಮಂದಿ. 66 ವರ್ಷ ಬದುಕಿದ ಸಿದ್ದಲಿಂಗಯ್ಯನವರು ಅವರ ಕ್ರಾಂತಿಕಾರಿ ಸಾಹಿತ್ಯ ಕೃಷಿ ಇಡೀ ಕರ್ನಾಟಕದಾದ್ಯಂತ ಜನಪ್ರಿಯ.

ಸರ್ಕಾರದ ಪರವಾಗಿ ಇಂದು ಡಾ ಸಿದ್ದಲಿಂಗಯ್ಯನವರ ಮೃತದೇಹದ ಅಂತಿಮ ದರ್ಶನವನ್ನು ಸಚಿವರಾದ ಬಸವರಾಜ ಬೊಮ್ಮಾಯಿ, ಆರ್ ಅಶೋಕ್ ಪಡೆದಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಅಂತಿಮ ದರ್ಶನ ಪಡೆದಿದ್ದರು.

ರಾಷ್ಟ್ರಕವಿ ಎಂದು ಘೋಷಿಸಿ: ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಗೌರವಾರ್ಥವಾಗಿ ಜ್ಞಾನಭಾರತಿ ಬಳಿ ಸ್ಮಾರಕ ಸ್ಥಾಪಿಸುವಂತೆ ಸರ್ಕಾರಕ್ಕೆ ಅವರು ಒತ್ತಾಯಿಸಿದ್ದಾರೆ. ಡಾ. ಸಿದ್ದಲಿಂಗಯ್ಯ ಅವರನ್ನು ಮರಣೋತ್ತರವಾಗಿ ‌ರಾಷ್ಟ್ರಕವಿ ಎಂದು ಘೋಷಿಸಬೇಕು. ರಾಷ್ಟ್ರಕವಿ ಎಂದು ಘೋಷಿಸಿ ಅವರ ಸೇವೆಯನ್ನು ಗೌರವಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

No Comments

Leave A Comment