Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಉಡುಪಿಯಲ್ಲಿನ ಅನಾರೋಗ್ಯ ಬಳಲುತ್ತಿರುವ ರೋಗಿಗಳ ತುರ್ತು ಸೇವೆಗಾಗಿ: “ಪ್ರಾಣರಕ್ಷಾ” ಶ್ರೀಕೃಷ್ಣ ಮುಖ್ಯಪ್ರಾಣ ಅ೦ಬುಲೆನ್ಸ್ -ಅಷ್ಟಮಠಾಧೀಶರಿ೦ದ ಜಿಲ್ಲಾಧಿಕಾರಿಗಳಿಗೆ ಹಸ್ತಾ೦ತರ

ಉಡುಪಿಯ ಅಸುಪಾಸಿನಲ್ಲಿನ ಅನಾರೋಗ್ಯ ಬಳಲುತ್ತಿರುವ ರೋಗಿಗಳ ತುರ್ತು ಸೇವೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲು ನೆರವಾಗುವ೦ತೆ ಉಡುಪಿಯ ಅಷ್ಟಮಠಾಧೀಶರಿ೦ದ ಕೊಡ ಮಾಡಲ್ಪಟ್ಟ 20 ಲಕ್ಷ ರೂ ವೆಚ್ಚದ “ಪ್ರಾಣರಕ್ಷಾ” ಶ್ರೀಕೃಷ್ಣ ಮುಖ್ಯಪ್ರಾಣ ಅ೦ಬುಲೆನ್ಸ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಬಳಕೆಗಾಗಿ ಶುಕ್ರವಾರದ೦ದು ಉಡುಪಿಯ ಜಿಲ್ಲಾಧಿಕಾರಿಗಳ ಮುಖ೦ತಾರ ಹಸ್ತಾ೦ತರ ಕಾರ್ಯಕ್ರಮವು ಶ್ರೀಕೃಷ್ಣಮಠದ ರಾಜಾ೦ಗಣದ ಮು೦ಭಾಗದಲ್ಲಿ ನೆರವೇರಿತು.

ಪರ್ಯಾಯ ಅದಮಾರು ಮಠದ ಶ್ರೀಈಶ ಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಕಿರಿಯ ಶ್ರೀಪಾದರಾದ ಶ್ರೀವಿದ್ಯಾರಾಜೇಶ್ವರ ಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು, ಸೋದೆ ಮಠದ ಶ್ರೀವಿಶ್ವವಲ್ಲಭ ಶ್ರೀಪಾದರು,ಶಿರೂರು ಮಠದ ಶ್ರೀವೇದವರ್ಧನ ಶ್ರೀಪಾದರು ಈ ಸರಳ ಸಮಾರ೦ಭದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಗಳಾದ ಜಿ ಜಗದೀಶ್,ಶಾಸಕರಾದ ಕೆ.ರಘುಪತಿ ಭಟ್, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್,ಡಿ ಎಚ್ ಒ ನಾಗಭೂಷಣ್ ಉಡುಪ, ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿ೦ದ ರಾಜ್ ,ಮತ್ತಿತರರು ಈ ಸ೦ದರ್ಭದಲ್ಲಿ ಹಾಜರಿದ್ದರು.

ಈಗಾಗಲೇ ಕಳೆದ ವರುಷದ ಕೊರೋನಾ ಲಾಕ್ ಡೌನ್ ಸ೦ದರ್ಭದಲ್ಲಿ ಈ ಎಲ್ಲಾ ಮಠದ ಪರವಾಗಿ ಸಾವಿರಾರುಮ೦ದಿಗೆ ಆಹಾರದ ಕಿಟ್ ಗಳನ್ನು ಹಾಗೂ ಈ ಬಾರಿಯೂ ಆಹಾರದ ಕಿಟ್ ಗಳನ್ನು ಸಹ ನೀಡಲಾಗಿದೆ.ಮಾತ್ರವಲ್ಲದೇ ಈ ಬಾರಿ ಪರ್ಯಾಯ ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಬಡವರಿಗೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿನ ವೈದ್ಯಕೀಯ ಸಿಬ್ಬ೦ದಿಗಳಿಗೆ ಮಧ್ಯಾಹ್ನದ ಅನ್ನದಾನವನ್ನು ಮಠದ ಪರವಾಗಿ ನೀಡುತ್ತಲೇ ಇದ್ದಾರೆ.

No Comments

Leave A Comment